ಜೋಗಮ್ಮಗೆ ಶ್ರಮ ಚೇತನ ಗೌರವ

301122 ChikkaKotnekal Jogamma Shrama Chetana
ಮಾನ್ವಿ ತಾಲೂಕು ಚಿಕ್ಕಕೊಟ್ನೆಕಲ್ ಗ್ರಾಮದ ಜೋಗಮ್ಮ ಮಂಗಳವಾರ ಬಾಗಲಕೋಟೆಯಲ್ಲಿ ಶ್ರಮ ಚೇತನ ಪುರಸ್ಕಾರ ಪಡೆದರು.
Published on

ಮಾನ್ವಿ: ಚಿಕ್ಕಕೊಟ್ನೆಕಲ್ ಗ್ರಾಪಂ ವ್ಯಾಪ್ತಿಯ ಜೋಗಮ್ಮ 2022 ರ ಶ್ರಮ ಚೇತನ ಪುರಸ್ಕಾರ ಪಡೆದಿದ್ದು, ಬಾಗಲಕೋಟೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನರೇಗಾ ಯೋಜನೆಯಡಿ ಕೆಲಸ ಮಾಡಿದ ಜಿಲ್ಲೆಯ ಮೂರು ಜನ ತೃತೀಯಲಿಂಗಿಯರಿಗೆ ಪುರಸ್ಕಾರ ಲಭಿಸಿದೆ. ರಾಯಚೂರು ತಾಲೂಕಿನ ಅಂಕಿತಾ, ಮಾನ್ವಿ ತಾಲೂಕಿನ ಜೋಗಮ್ಮ ಮತ್ತು ಲಿಂಗಸೂಗುರು ತಾಲೂಕಿನ ಪಾರ್ವತಿ ಜೋಗಮ್ಮ ಪುರಸ್ಕಾರ ಪಡೆದವರು. ನರೇಗಾ ಯೋಜನೆಯಡಿ ಮೇಟಿಯಾಗಿ ನಮ್ಮ ಊರಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಕೂಲಿ ಹಣದಿಂದ ನನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಪುರಸ್ಕಾರ ಲಭಿಸಿರುವುದಕ್ಕೆ ತುಂಬಾ ಸಂತಸವಾಗಿದೆ ಎಂದು ಜೋಗಮ್ಮ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net