ವಿಜಯದಾಸರ ಆರಾಧನೋತ್ಸವದ ಉತ್ತರರಾಧನೆ

06112022 Manavi vijayadasara aaradhane
Published on

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ವಿಜಯದಾಸರ 267ನೇ ಆರಾಧನಾ ಮಹೋತ್ಸವದ ಏಕಾದಶಿ ಅಂಗವಾಗಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆವರೆಗೆ ನಾಡಿನ ಖ್ಯಾತ ಕಲಾವಿದರಿಂದ ಹರಿದಾಸವಾಣಿ, ಅಖಂಡ ಹರಿನಾಮ ಸಂಕೀರ್ತನೆ, ಜಾಗರಣೋತ್ಸವ, ಭಜನೆ ನಡೆಯಿತು. ಉತ್ತರರಾಧನೆ ಅಂಗವಾಗಿ ಶನಿವಾರ ಬೆಳಗ್ಗೆ ಹರಿವಾಣ ಸೇವೆ ಸುಪ್ರಭಾತ ಸೇವೆ ಏರ್ಪಡಿಸಲಾಗಿತ್ತು.

ಮದ್ಭಾಗವತ ಹಾಗೂ ವಿಜಯದಾಸರ ಜೀವನ ಚರಿತ್ರೆ ಕುರಿತು ಪ್ರವಚನ ಹಾಗೂ ವಿಜಯದಾಸರ ಕರಾರ್ಚಿತ ದೇವಿ ಭೂದೇವಿ ಸಮೇತ ಶ್ರೀನಿವಾಸ ದೇವಾತ ಮೂರ್ತಿಗಳ ಅರ್ಚನೆಯನ್ನು ಟಿಟಿಡಿ ದಾಸ ಸಾಹಿತ್ಯ ಪರಿಷತ್ ನಿವೃತ್ತ ನಿರ್ದೇಶಕ ಕೌತಳಂ ಶ್ರೀ ಅಪ್ಪಣ್ಣಾಚಾರ್ಯರು ನೆರವೇರಿಸಿದರು.

ಶ್ರೀ ವಿಜಯದಾಸರ ವಂಶಸ್ಥರಾದ ಚೀಕಲಪರ್ವಿಯ ಜಗನ್ನಾಥ ದಾಸ್, ಕೃಷ್ಣದಾಸ್, ಮೋಹನ್‌ದಾಸ್, ಪ್ರಶಾಂತ ದಾಸ್ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net