

ಮಾನ್ವಿ : ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜ ಪರಿವರ್ತನೆ ಮಾಡಿದ್ದಾರೆ. ಅಲ್ಲಮ ಪ್ರಮತರು, ಅಕ್ಕಮಹಾದೇವಿ, ಸೋನ್ನಾಲಪುರದ ಸಿದ್ದರಾಮೇಶ್ವರರು ಪಾದಯಾತ್ರೆ ಮೂಲಕವೇ ಶ್ರೀಶೈಲ ಮಲ್ಲಯ್ಯನ ದರ್ಶನ ಪಡೆದಿದ್ದಾರೆಂದು ಶ್ರೀ ಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ ಹೇಳಿದರು.
ತಾಲೂಕಿನ ಚೀಕಲಪರ್ವಿ ಗ್ರಾಮದ ಶ್ರೀಮಠದಿಂದ ಲಿಂ.ರುದ್ರಮುನೀಶ್ವರ ಶಿವಯೋಗಿಗಳ 94ನೇ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದ ಗುಡ್ಡದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿದರು. ಚೀಕಲಪರ್ವಿಯ ಲಿಂ.ರುದ್ರಮುನೀಶ್ವರ ಶಿವಯೋಗಿಗಳು ಪಟ್ಟಣದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪಾವನ ಸನ್ನಿಧಾನದಲ್ಲಿ ಅನುಷ್ಠಾನ ಕೈಗೊಂಡು ಈ ಕ್ಷೇತ್ರವನ್ನು ತಪೋಭೂಮಿಯನ್ನಾಗಿಸಿದ್ದಾರೆ. ಶ್ರೀಗಳ ಸ್ಮರಣೆಗಾಗಿ 94ನೇ ಜಾತ್ರೋತ್ಸವ ನಡೆಸಲಾಗುತ್ತಿದೆ ಎಂದರು.
ಶಾಸಕ ರಾಜಾ ವೆಂಕಟಪ್ಪನಾಯಕ, ಮಾಜಿ ಶಾಸಕರಾದ ಎನ್.ಎಸ್.ಬೋಸರಾಜು, ಹಂಪಯ್ಯನಾಯಕ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಪಿಐ ಮಹಾದೇವಪ್ಪ, ಪ್ರಮುಖರಾದ ನಿರಂಜನ್ ದೇವರು ಮೈಸೂರು, ಶರಣಬಸವ ದೇವರು ಅರಹಳ್ಳಿ, ಡಾ.ಚಂದ್ರಶೇಖರಯ್ಯ ಸುವರ್ಣಗಿರಿಮಠ, ಎ.ಬಿ.ಉಪ್ಪಳಮಠ, ಗುಮ್ಮ ಬಸವರಾಜ, ಅರುಣ ಚಂದಾ, ಶ್ರೀಕಾಂತ ಪಾಟೀಲ್ ಗೂಳಿ ಇದ್ದರು.