

ಮಾನ್ವಿ: ಪಟ್ಟಣದ ಕೇಂದ್ರ ಗ್ರಂಥಾಲಯದಲ್ಲಿ ಛತ್ತಿನ ಕಾಂಕ್ರಿಟ್ ಬಿದ್ದ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ರಾಮುಗೆ ಶುಕ್ರವಾರ ಗಾಯವಾಗಿದೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಓದುತ್ತಿರುವಾಗ ಛತ್ತಿನ ಕಾಂಕ್ರಿಟ್ ಉದುರಿದ್ದು ಹೆಚ್ಚಿನ ಅನಾಹುತ ತಪ್ಪಿದೆ. ಛತ್ತು ಕೆಲ ಭಾಗದಲ್ಲಿ ಬಿರುಕು ಬಿಟ್ಟಿದೆ. ಜಿಲ್ಲಾ ಗ್ರಂಥಾಲಯ ಅಧಿಕಾರಿ ಡಾ. ರಾಮಖಲಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಂಥಾಲಯ ಸಹಾಯಕಿ ಪಾರ್ವತಿ ಇದ್ದರು.