ರೈತ ಮೋರ್ಚಾ ಸಮಾವೇಶ 5ರಂದು

03042023 manvi siddanagowda
Published on

ಮಾನ್ವಿ: ಪಟ್ಟಣದ ಧ್ಯಾನಮಂದಿರದಲ್ಲಿ ಏ.5 ರಂದು ಬಿಜೆಪಿ ರೈತ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಂ.ಸಿದ್ದನಗೌಡ ನೆಲಹಾಳ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕು ಮಟ್ಟದ ರೈತ ಮೋರ್ಚಾ ಸಮಾವೇಶವನ್ನು ಈ ಹಿಂದೆಯೇ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದು, ಈಗ ಚುನಾವಣಾ ನೀತಿ ಸಂಹಿತೆಗೆ ಧಕ್ಕೆಯುಂಟಾಗದಂತೆ ಸಮಾವೇಶ ನಡೆಸಲಾಗುವುದು. ಬಿಜೆಪಿ ಸಂಘಟನೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಅಭ್ಯುದಯಕ್ಕಾಗಿ ಜಾರಿಗೆ ತಂದಿರುವ ಮಹತ್ವದ ಯೋಜನೆಗಳ ಮಾಹಿತಿಯನ್ನು ಸಮಾವೇಶದಲ್ಲಿ ನೀಡಲಾಗುವುದು. ಸಚಿವ ಭೈರತಿ ಬಸವರಾಜ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸೇರಿ ಪಕ್ಷದ ಅನೇಕ ಮುಖಂಡರು, ಕೃಷಿ ತಜ್ಞರು, ರೈತ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಗಂಗಾಧರನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ವೀರಭದ್ರಗೌಡ ಗವಿಗಟ್, ಪ್ರಮುಖರಾದ ಉಮೇಶ ಸಜ್ಜನ್, ಶ್ರೀಕಾಂತ ಪಾಟೀಲ್ ಗೂಳಿ, ಶರಣಪ್ಪಗೌಡ ಮೇಟಿ ಮಾಡಗಿರಿ, ಮಲ್ಲಿಕಾರ್ಜುನಗೌಡ ಸಂಗಾಪುರು, ಮಹಾದೇವಪ್ಪಗೌಡ, ಉದಯಕುಮಾರ, ರಂಗಪ್ಪ ನಾಯಕ, ವಿರೋಜಮ್ಮ ಕೊಟ್ನೆಕಲ್, ಲಕ್ಷ್ಮೀದೇವಿ ನಾಯಕ, ಗುರುಗೌಡ ಕಣ್ಣೂರು, ಶಿವಲಿಂಗಯ್ಯ ಸ್ವಾಮಿ, ವೀರನಗೌಡ ಗಣದಿನ್ನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net