ವಿಶ್ವಗುರು ಬಸವಣ್ಣ ಮೂರ್ತಿಗೆ ಮಾಲಾರ್ಪಣೆಗೈದ ಮುಖಂಡರು

14052021 Manvi Basava Jayanti celbrate
Published on

ಮಾನ್ವಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮತ್ತು ಬಸವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಸಂತೋಷಿರಾಣಿ, ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕಂದಾಯ ಸಿಬ್ಬಂದಿ ಇದ್ದರು.

ಬಸವ ವೃತ್ತದಲ್ಲಿ: ಪಟ್ಟಣದ ಬಸವ ವೃತ್ತದಲ್ಲಿ ಬಸವಕೇಂದ್ರದಿಂದ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ವೀರನಗೌಡ ವಕೀಲ ಪೋತ್ನಾಳ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಬಸವಪ್ರಭು ಪಾಟೀಲ್ ಕರಡಿಗುಡ್ಡ, ಸೋಮಶೇಖರ ಗುಮ್ಮ, ಬಸನಗೌಡ ಬೆಟ್ಟದೂರು, ಶಿವಶರಣ ಮೇದಾ, ಮಹಾಂತೇಶ ಕೊಟ್ನೆಕಲ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net