ಮಂಗದ ಮರಿಯನ್ನು ರಕ್ಷಿಸಿದ ಅಗ್ನಿಶಾಮಕ ಅಧಿಕಾರಿಗಳು

Manvi monkey save
ಮಾನ್ವಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿನ ಬಹು ಮಹಡಿ ಕಟ್ಟಡದಲ್ಲಿನ ಕಿಟಕಿಯಲ್ಲಿ ಸಿಲುಕಿದ ಮರಿ ಮಂಗವನ್ನು ರಕ್ಷಸಿದ ಅಗ್ನಿಶಾಮಕ ಸಿಬ್ಬಂದಿಗಳು.
Published on

ಮಾನ್ವಿ: ಪಟ್ಟಣದ ಸಿಂಧನೂರು ರಸ್ತೆಯಲ್ಲಿನ ಬಹು ಮಹಡಿ ಕಟ್ಟಡದಲ್ಲಿನ ಕಿಟಕಿಯನ್ನು ತಾಯಿ ಮತ್ತು ಮರಿ ಮಂಗಗಳು ದಾಟುವಾಗ ಕಿಟಕಿಗೆ ಮರಿ ಮಂಗದ ಕೈ ಸಿಲುಕಿಕೊಂಡಿದೆ.

ರಕ್ಷಿಸಲು ತಾಯಿ ಕಿರುಚಾಡುವುದನ್ನು ಕಂಡ ಜನರು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಹಜೀಮಿಯಾ ನೇತೃತ್ವದ ತಂಡವು ಬೃಹತ್ ಏಣಿಯ ಸಹಾಯದಿಂದ ಕಟ್ಟಡವನ್ನು ಹತ್ತಿ ಮಂಗದ ಮರಿಯನ್ನು ರಕ್ಷಿಸಿ ಚಿಕಿತ್ಸೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net