ಆಂಜನೇಯ್ಯಸ್ವಾಮಿಯ 19ನೇ ವಾರ್ಷಿಕೋತ್ಸವ

060822 Manvi Anjaneyaswami 19th year Parade
ಮಾನ್ವಿ ಪಟ್ಟಣದಲ್ಲಿ ಶನಿವಾರ ಉದ್ಭವ ಆಂಜನೇಯ್ಯಸ್ವಾಮಿ 19ನೇ ವಾರ್ಷಿಕೋತ್ಸವ ಮೆರವಣಿಗೆಯಲ್ಲಿ ಕಲಾವಿದರು ವೀರಗಾಸೆ ನೃತ್ಯ ಪ್ರದರ್ಶನ ಮಾಡಿದರು.
Published on

ಮಾನ್ವಿ: ಪಟ್ಟಣದ ಎಪಿಎಂಸಿ ಯಾರ್ಡ್‌ನ ಉದ್ಭವ ಆಂಜನೇಯ್ಯಸ್ವಾಮಿಯ 19ನೇ ವಾರ್ಷಿಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಶನಿವಾರ ನಡೆಯಿತು. ದೇವಸ್ಥಾನದಲ್ಲಿ ಬೆಳಗ್ಗೆ 5 ರಿಂದ ಸುಪ್ರಭಾತ, ಪವಮಾನ ಹೋಮ, ಪಂಚಾಮೃತ, ತುಳಸಿ ಪುಷ್ಪಾರ್ಚನೆ, ಪೂರ್ಣಾಹುತಿ ನಂತರ ಎಲ್ಲಾ ಭಕ್ತರಿಗೆ ತಿರ್ಥ ಪ್ರಸಾದ ಕಾರ್ಯಕ್ರಮ ಜರುಗಿತು. ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನದಿಂದ ಆಂನೇಯ್ಯಸ್ವಾಮಿ ದೇವಸ್ಥಾನವರೆಗೆ ಸುಮಂಗಲೆಯರಿಂದ ಭಜನೆ, ಕುಂಭ, ಕಳಸ, ಕುಣಿತದೊಂದಿಗೆ ಆಂಜನೇಯ್ಯ ಸ್ವಾಮಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ಭಾರದ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net