

ಕರೊನಾ ವಾರಿಯರ್ಸ್‌ಗೆ ಕಿಟ್‌ಗಳ ವಿತರಣೆ
ಮಾನ್ವಿ: ರೋಗಿಗಳಿಗೆ ವೈದ್ಯರು, ಆಶಾ, ಅಂಗನಾವಾಡಿ ಕಾರ್ಯಕರ್ತೆಯರು, ನರ್ಸ್‌ಗಳು ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ಪಟ್ಟಣದ ಕಾಕತೀಯ ಶಾಲಾವರಣದಲ್ಲಿ ರಾಜಾ ಅಂಬಣ್ಣ ನಾಯಕ ದೊರೆ ಫೌಂಡೇಷನ್‌ನಿಂದ ಭಾನುವಾರ ಕರೊನಾ ವಾರಿಯರ್ಸ್‌ಗೆ ಆಹಾರ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನ್ವಿ ಮತ್ತು ಸಿರವಾರ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆ ರೋಗಿಗಳನ್ನ ಕರೆದೊಯ್ಯಲು 50 ಲಕ್ಷ ರೂ. ವೆಚ್ಚದಲ್ಲಿ ಎರಡು ಆಂಬುಲೆನ್ಸ್ ವಾಹನ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದ ಮತ್ತು ಕರೊನಾ ವಾರಿಯರ್ಸ್‌ಗೆ 18 ದಿನಗಳಿಂದ ಅನ್ನದಾಸೋಹ ಮಾಡಲಾಗುತ್ತಿದೆ. ಸಿರವಾರದಲ್ಲಿ ನೂತನ ಆಸ್ಪತ್ರೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಹೆಚ್ಚೆಚ್ಚು ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಕಲ್ಮಠ ವಿರೂಪಾಕ್ಷ ಪಂಡಿತಾರಾಧ್ಯರು, ಫಾದರ್ ಜ್ಞಾನಪ್ರಕಾಶಂ, ಧರ್ಮಗುರು ಜಿಶಾನ್‌ಖಾದ್ರಿ, ಜೆಡಿಎಸ್ ತಾಲೂಕು ಅಧ್ಯಕ್ಷರಾದ ಮಲ್ಲಿಕಜಾರ್ಉನಗೌಡ ಬಲ್ಲಟಗಿ, ಮುಖಂಡ ಜಂಬುನಾಥ ಯಾದವ, ತಹಸೀಲ್ದಾರ್ ಸಂತೋಷಿರಾಣಿ, ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯಸ್ವಾಮಿ ಮಾತನಾಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಮುಖಂಡರಾದ ನಾಗರಾಜ ಭೋಗಾವತಿ, ಇಸ್ಮಾಯಿಲ್‌ಸಾಬ್, ಜಿ.ಲೋಕರಡ್ಡಿ, ಮಲ್ಲಪ್ಪ ಹೂಗಾರ, ಗೋಪಾಲನಾಯಕ ಹರವಿ, ರವಿಕುಮಾರ, ದೇವರಾಜ್, ಶರಣಪ್ಪ ಮೇದಾ, ನರಸಿಂಹನಾಯಕ ವಕೀಲರು, ಈರಣ್ಣ ಮರ್ಲಟ್ಟಿ, ಮಹಾದೇವಪ್ಪ, ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮೀ ಸಿರವಾರ, ಪಿಐ ಮಹಾದೇವಪ್ಪ, ಪುರಸಭೆ ಸಿಒ ಜಗದೀಶ ಬಂಢಾರಿ ಇತರರಿದ್ದರು.