

ಮಾನ್ವಿ: ರಾಯಚೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಪೋತ್ನಾಳದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಪ್ರತಿಭಟನಾಕಾರರು ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖರಾದ ಪಿ.ಯೇಸಪ್ಪ, ಕೆ.ನಾಗಲಿಂಗಸ್ವಾಮಿ, ಯಲ್ಲಪ್ಪ ಬಾದರದಿನ್ನಿ, ಪಿ.ರವಿಕುಮಾರ, ಎಚ್.ಶರ್ಫುದ್ದೀನ್, ಶಿವರಾಜ ಹೊಸೂರು, ಮೈಕಲ್, ದೇವಿಪುತ್ರ, ಅಶೋಕ ತಡಕಲ್, ಹುಚ್ಚಪ್ಪ ಛಲವಾದಿ, ಯಲ್ಲಪ್ಪ ಉಟಕನೂರು, ಚಿನ್ನಮ್ಮ ಮುದ್ದಂಗುಡ್ಡಿ, ಹನುಮಂತ ಉದ್ಬಾಳ್, ಕೆ.ಬಸವರಾಜ ನಾಯಕ, ಚಾರ‌್ಲಿ ಉದ್ಬಾಳ್, ಮಂಜುನಾಥ ನಾಯಕ ಇತರರಿದ್ದರು.