ಬ್ರಿಟಿಷರೊಂದಿಗೆ ಸಂಧಾನ ರಹಿತ ಹೋರಾಟ

17mnv01
Published on

ಮಾನ್ವಿ: ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ಮಹಾನ್ ಸೇನಾನಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ದೇಶಪ್ರೇಮ ಯುವಕರಿಗೆ ಮಾದರಿಯಾಗಿದೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ತಿಳಿಸಿದರು.

ಪಟ್ಟಣದ ಬಸವ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್‌ನಿಂದ ಆಯೋಜಿಸಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್ 125ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸುಭಾಷ್ ಚಂದ್ರ ಬೋಸ್ ಬಾಲ್ಯದಿಂದಲೂ ಅಪ್ರತಿಮ ದೇಶಭಕ್ತರಾಗಿದ್ದು, ಬ್ರಿಟಿಷರೊಂದಿಗೆ ಯಾವುದೇ ಸಂಧಾನ ಮಾಡಿಕೊಂಡಿರಲಿಲ್ಲ ಎಂದರು.

ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ದ್ವೇಷ ಭಾವನೆ ಹರಡುವ ಮೂಲಕ ಜನರ ಐಕ್ಯತೆ ಮುರಿಯುವ ಕೆಲಸಗಳು ದೇಶದಲ್ಲಿ ನಡೆಯುತ್ತಿದ್ದು, ಜಾತಿ, ಧರ್ಮ ವ್ಯಕ್ತಿಗತ ನಂಬಿಕೆ ಆಗಿರಬೇಕು ಎಂದು ಚನ್ನಬಸವ ಜಾನೇಕಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net