ಅನೈತಿಕ ಸಂಬಂಧ ಶಂಕೆ, ಪತ್ನಿ ಕೊಲೆ-ಪತಿ ಬಂಧನ

487083-rp-700
Published on

ಮಾನ್ವಿ: ಅನೈತಿಕ ಸಂಬಂಧ ಶಂಕೆಯಿಂದ ತಾಲೂಕಿನ ಸಾದಪುರು ಗ್ರಾಮದ ನಾಗರಾಜ ತನ್ನ ಪತ್ನಿ ಪವಿತ್ರಾ (21) ಎಂಬುವರನ್ನು ಒನಕೆ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

2 ವರ್ಷದ ಹಿಂದೆ ಸರ್ಜಾಪುರ ಗ್ರಾಮದ ಪವಿತ್ರಾಳನ್ನು ವಿವಾಹವಾಗಿದ್ದ. ಆತನ ತಾಯಿ ಮೃತಪಟ್ಟಿದ್ದು, ತಂದೆ ಪಾರ್ಶುವಾಯುನಿಂದ ಬಳಲುತ್ತಿದ್ದಾರೆ. ನಾಗರಾಜ ಪತ್ನಿಗೆ ದಿನ ಕಿರುಕುಳ ನೀಡುತ್ತಿದ್ದು, ಬುಧವಾರ ರಾತ್ರಿ ಮದ್ಯ ಸೇವಿಸಿ ಬಂದು ಕೊಲೆ ಮಾಡಿದ್ದಾನೆ ಎಂದು ಪವಿತ್ರಾ ದೊಡ್ಡಪ್ಪ ಆಂಜನೇಯ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗರಾಜನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net