ಪ್ರವಚನ ಕೇಳುವುದರಿಂದ ಮನಸ್ಸಿನ ಮೈಲಿಗೆ ದೂರ

ಮಾನ್ವಿ ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಮಠದಲ್ಲಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಉದ್ಘಾಟಿಸಿದರು. ಅಡವಿ ಅಮರೇಶ್ವರ ಮಠದ ಶಾಂತಮಲ್ಲ ಸ್ವಾಮೀಜಿ, ಕಿರಿಯ ಶ್ರೀಗಳಾದ ತೊಂಟದಾರ್ಯ ಸ್ವಾಮೀಜಿ ಇದ್ದರು.
ಮಾನ್ವಿ ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಮಠದಲ್ಲಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಉದ್ಘಾಟಿಸಿದರು. ಅಡವಿ ಅಮರೇಶ್ವರ ಮಠದ ಶಾಂತಮಲ್ಲ ಸ್ವಾಮೀಜಿ, ಕಿರಿಯ ಶ್ರೀಗಳಾದ ತೊಂಟದಾರ್ಯ ಸ್ವಾಮೀಜಿ ಇದ್ದರು.
Published on

ಮಾನ್ವಿ: ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳು ಮತ್ತು ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು ಸಮಾಜದ ಏಳಿಗೆಗೆ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಸುವರ್ಣಗಿರಿ ವಿರಕ್ತಮಠ ಅಡವಿ ಅಮರೇಶ್ವರ ಮಠದಲ್ಲಿ 71ನೇ ಜಾತ್ರೋತ್ಸವ ಅಂಗವಾಗಿ ಶನಿವಾರ ಇಳಕಲ್ಲ ವಿಜಯ ಮಹಾಂತ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಸುಕ್ಷೇತ್ರದಲ್ಲಿ ಪ್ರವಚನ ಕೇಳುವುದರಿಂದ ಮನಸ್ಸಿನ ಮೈಲಿಗೆ ಕಳೆದು ಪುಣ್ಯಪ್ರಾಪ್ತಿಯಾಗುತ್ತದೆ. ಮಹನೀಯರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಪ್ರವಚನಕಾರ ಮೈಸೂರಿನ ನಿರಂಜನ ದೇವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು, 15ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, 18ನೇ ಶತಮಾನದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳು ಹಾಗೂ ಇಳಕಲ್ಲ ವಿಜಯ ಮಹಾಂತ ಶಿವಯೋಗಿಗಳು ಜನರಿಗೆ ಭಕ್ತಿ ಹಾಗೂ ಸನ್ಮಾರ್ಗದಲ್ಲಿ ನಡೆಯುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಅಮರೇಶ ಗವಾಯಿ ಸಾಲಿಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಿಕಾರ್ಜುನಗೌಡ ತಬಲಾ ಸಾಥ್ ನೀಡಿದರು. ಅಡವಿ ಅಮರೇಶ್ವರ ಮಠದ ಶಾಂತಮಲ್ಲ ಸ್ವಾಮೀಜಿ, ಕಿರಿಯ ಶ್ರೀಗಳಾದ ತೊಂಟದಾರ್ಯ ಸ್ವಾಮೀಜಿ. ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಕಿರಿಯ ಶ್ರೀಗಳಾದ ಬಸವಲಿಂಗ ಸ್ವಾಮೀಜಿ, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ, ಉಮಳಿಹೊಸೂರಿನ ಕಿಡಿಗಣ್ಣಯ್ಯ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net