ದೆಹಲಿ, ಪಂಜಾಬ್ ಮಾದರಿಯಲ್ಲಿ ಅಭಿವೃದ್ಧಿ

03042023 manvi rudrayya hiremath
Published on

ಮಾನ್ವಿ: ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ದೆಹಲಿ ಹಾಗೂ ಪಂಜಾಬ್ ಮಾದರಿಯಲ್ಲಿ ಜನತೆಗೆ ಮೂಲ ಸೌಲಭ್ಯ ಕಲ್ಪಿಸುವುದಾಗಿ ಎಎಪಿ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತಮ ಶಿಕ್ಷಣ, ಆರೋಗ್ಯ, ಮಹಿಳಾ ಸ್ವಾವಲಂಬನೆ, ಕೃಷಿ, ನೀರಾವರಿ, ವಿದ್ಯುತ್, ರಸ್ತೆ ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು. ಮಾನ್ವಿ ಕ್ಷೇತ್ರ ತೀರಾ ಹಿಂದುಳಿದಿದ್ದು, ಇದುವರೆಗೆ ಶಾಸಕರಾಗಿರುವ ಯಾರೂ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂದರು. ತಾಲೂಕು ಅಧ್ಯಕ್ಷ ಶರಣಗೌಡ ಬಲ್ಲಟಗಿ, ನಗರ ಘಟಕದ ಅಧ್ಯಕ್ಷ ಯೂಸೂಫ್ ಖುರೇಶಿ, ಪ್ರಮುಖರಾದ ರಾಜಾ ಶ್ಯಾಮಸುಂದರ ನಾಯಕ ವಕೀಲ, ನಾಗರಾಜ್, ಸೈಯದ್ ತಾಹೇರ್ ಹುಸೇನಿ ಮತವಾಲೆ, ಮಕ್ಬೂಲ್ ಪಾಷಾ, ವೆಂಕಟೇಶ ನಾಯಕ, ಬಸವರಾಜ ವಕೀಲ, ದೇವರಾಜ್ ನಾಯಕ, ಬಸವರಾಜ ರಬ್ಬಣಕಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net