ಮಾನ್ವಿ ತಾಲೂಕಿನಲ್ಲಿ ಶೇ.75 ವೋಟಿಂಗ್

3mnv01
Published on

ಮಾನ್ವಿ: ತಾಲೂಕಿನಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪಟ್ಟಣದ ತಹಸಿಲ್ ಕಚೇರಿ, ಕುರ್ಡಿ ಮತ್ತು ಹಿರೇಕೊಟ್ನೆಕಲ್ ಗ್ರಾಮಗಳಲ್ಲಿ ಪದವೀಧರರು ಮತ ಚಲಾಯಿಸಿದರು. ಶೇ.75 ಮತದಾನವಾಗಿದೆ.

ತಾಲೂಕಿನಲ್ಲಿ ಒಟ್ಟು 1946 ಮತದಾರರಿದ್ದು, ಪಟ್ಟಣದ ಮತಗಟ್ಟೆಯಲ್ಲಿ 1314 ರ ಪೈಕಿ 974 ಜನರು ಮತ ಚಲಾಯಿಸಿದರು.
ಹಿರೇಕೊಟ್ನೆಕಲ್ ಗ್ರಾಪಂ ಮತಗಟ್ಟೆ ವ್ಯಾಪ್ತಿಯಲ್ಲಿ 309 ಜನರ ಪೈಕಿ 240 ಮತದಾರರು ಹಕ್ಕು ಚಲಾಯಿಸಿದರು. ಕುರ್ಡಿ ಗ್ರಾಪಂ ಕೇಂದ್ರ ವ್ಯಾಪ್ತಿಯಲ್ಲಿ 323 ಜನರ ಪೈಕಿ 239 ಮತದಾರರು ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net