ಮನುವಾದಿ ಪಕ್ಷಗಳಿಂದ ಸಮಸ್ಯೆ ಸೃಷ್ಟಿ : ರಾಜ್ಯಸಭಾ ಮಾಜಿ ಸದಸ್ಯ ಅಶೋಕ ಸಿದ್ದಾರ್ಥ

bvs
Published on

ಮೈಸೂರು: ಮನುವಾದಿ ರಾಜಕೀಯ ಪಕ್ಷಗಳು ಸೃಷ್ಟಿಸಿರುವ ಸಮಸ್ಯೆಗಳನ್ನು ಜನರಿಗೆ ಅರ್ಥ ಮಾಡಿಸುವ ಮಾಡಿಸುವ ಕಾರ್ಯವನ್ನು ಬಹುಜನ ವಿದ್ಯಾರ್ಥಿ ಸಂಘ ಯಶಸ್ವಿಯಾಗಿ ಮಾಡುತ್ತಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಅಶೋಕ ಸಿದ್ದಾರ್ಥ ಹೇಳಿದರು.

ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಯೋಜಿಸಿದ್ದ ಬಹುಜನ ವಿದ್ಯಾರ್ಥಿ ಸಂಘದ ಬೆಳ್ಳಿಹಬ್ಬ ಹಾಗೂ ಸಂವಿಧಾನದ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ನೌಕರಿ ಬಡ್ತಿಯಲ್ಲಿ ಮೀಸಲಾತಿ ತರಲು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರಯತ್ನಿಸಿದ್ದರು. ಆದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟುಗೂಡಿ ವಿರೋಧಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಟ ಅಶೋಕ್ ಮಾತನಾಡಿ, ಹಿಂದು ರಾಷ್ಟ್ರ ನಿರ್ಮಾಣ ಮಾಡಿ ಮೇಲ್ವರ್ಗದವರು ಮಾತ್ರ ಆಡಳಿತ ನಡೆಸಬೇಕು ಎಂಬ ಹುನ್ನಾರ ನಡೆಯುತ್ತಿದೆ. ಅವರ ಉದ್ದೇಶವನ್ನು ಬಹುಜನರು ಸೋಲಿಸುವ ಮೂಲಕ ಅಧಿಕಾರಕ್ಕೆ ಬರಬೇಕು. ಮತ್ತೆ ಶತಮಾನಗಳ ಹಿಂದಿನ ಗುಲಾಮಗಿರಿಗೆ ಮರಳ ಬಾರದು. ಹಾಗಾಗಿ ರಾಜಕೀಯ ಅಧಿಕಾರ ಪಡೆಯಬೇಕು ಎಂದು ಕರೆ ನೀಡಿದರು.

ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಸಂವಿಧಾನವನ್ನು ನಾಶ ಮಾಡಲು ಹೊರಟವರು ಹಾಗೂ ಸಂವಿಧಾನ ರಕ್ಷಣೆ ಹೆಸರಿನಲ್ಲಿ ಮೌನವಾಗಿದ್ದವರು ಇಂದು ನಮ್ಮನ್ನು ಆಳುತ್ತಿದ್ದಾರೆ. ಹಾಗಾರಿ ಬಹುಜನರು ಪರ್ಯಾಯ ರಾಜಕಾರಣ ಕಟ್ಟಬೇಕು ಎಂದು ಕರೆ ನೀಡಿದರು.

ತುಮಕೂರು ವಿಶ್ವವಿದ್ಯಾಲಯ ಪ್ರೊ.ಬಿ.ರಮೇಶ್, ಮಾಜಿ ಮೇಯರ್ ಪುರುಷೋತ್ತಮ್, ಪತ್ರಕರ್ತ ಕೆ.ನರಸಿಂಹಮೂರ್ತಿ, ಲೇಖಕ ವಡ್ಡಗೆರೆ ನಾಗರಾಜಯ್ಯ, ಚಿಂತಕರಾದ ಬಿ.ಶಿವಣ್ಣ ಕನಕಪುರ, ಚಂದ್ರಹಾಸ್, ಲೇಖಕ ಕೃಷ್ಣಮೂರ್ತಿ ಚಮರಂ, ಲೇಖಕಿ ಎಂ.ಪ್ರೇಮಾ ಬೋಧಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net