ಮನುಸ್ಮೃತಿ ವೇದಾಂತವಲ್ಲ, ಧರ್ಮಶಾಸ್ತ್ರ: ಲಕ್ಷ್ಮೀಶ ತೋಳ್ಪಾಡಿ

UDP-6-5-Book
Published on

ಉಡುಪಿ: ಸನಾತನ ಮನುಸ್ಮತಿ ವೇದಾಂತವಲ್ಲ, ಅದೊಂದು ಧರ್ಮ ಶಾಸ್ತ್ರ. ಮನುಷ್ಯನ ಆಚಾರ&ವಿಚಾರಗಳ ಕುರಿತಾಗಿ ಇರುವ ಶಾಸ್ತ್ರ. ಬ್ರಾಹ್ಮಣರು ಹೇಗಿರಬೇಕು. ಬ್ರಾಹ್ಮಣರಲ್ಲದವರು ಹೇಗಿರಬೇಕೆಂಬ ಆಚಾರ ಸಂಹಿತೆ ಅದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

ಉಡುಪಿಯ ಕಾಲೇಜಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ (ಮಾಹೆ) ಶನಿವಾರ ಆಯೋಜಿಸಿದ್ದ ಹಿರಿಯ ಲೇಖಕ ಡಾ. ಬಿ.ಭಾಸ್ಕರ್​ ರಾವ್​ ಅವರ "ಮನುಸ್ಮತಿ; ಒಂದು ವಿಶಿಷ್ಟ ಕೃತಿ' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ನಾವಿಂದು 21ನೇ ಶತಮಾನದಲ್ಲಿದ್ದೇವೆ. ಎಲ್ಲ ಬಗೆಯ ಜ್ಞಾನವನ್ನು ಕ್ಷಣಾರ್ಧದಲ್ಲಿ ಪಡೆಯುವ ಸೌಲಭ್ಯ ಈಗ ಲಭ್ಯವಿದೆ. ಹೀಗಾಗಿ ಅಂದಿನ ಕಾಲಕ್ಕೆ ಸೂಕ್ತವಾಗಿದ್ದ ಮನುಸ್ಮತಿಯ ಅಗತ್ಯ ಈಗ ಇಲ್ಲ. ಯಾವ ಮಹದಾಚಾರ್ಯರೂ ಜಾತಿ ಮತ್ತು ಹುಟ್ಟನ್ನು ಒಪ್ಪಲಿಲ್ಲ ಎಂದರು. ಪ್ಲೇಟೋವಿನ "ಉದಾತ್ತ ಸುಳ್ಳು' ಹಾಗೂ ಮನುವಿನ "ಅಪ್ರಿಯ ಸತ್ಯ'ಗಳ ಕುರಿತು ವಿವರಿಸಿದ ಅವರು, ಸಮಾಜಕ್ಕೆ ಹಾಗೂ ಈಗಿರುವ ವ್ಯವಸ್ಥೆ ಬದಲಾವಣೆಗೆ ಹೊಸ ಸ್ಮತಿ ಅಥವಾ ಸಂವಿಧಾನ ಬೇಕಿದೆ. ಇಂತಹ ಪಾಪಕ್ಕೆ ಇಂತಹ ಶಿೆ ಎಂಬ ಕಾನೂನು ರಚನೆಯಾಗಬೇಕಿದೆ ಎಂದರು.

ಟರ್ನಿಂಗ್​ ಪಾಯಿಂಟ್​: ಎಲ್ಲರ ಜೀವನದಲ್ಲಿ "ಟರ್ನಿಂಗ್​ ಪಾಯಿಂಟ್​' ಎನ್ನುವುದು ಬರುತ್ತದೆ. ಅದರಂತೆ, ಸಾಮಾಜಿಕ ಹಾಗೂ ಆಧುನಿಕ ಚಿಂತನೆಗಳ ಕುರಿತು ಬರೆಯುತ್ತಿದ್ದ ಲೇಖಕ ಭಾಸ್ಕರ್​ ಅವರು ಮನುಸ್ಮತಿ ಕುರಿತು ಬರೆದಿರುವುದು ಅವರ ಸಾಹಿತ್ಯ ಪಯಣದಲ್ಲಿ ಆದ "ಟರ್ನಿಂಗ್​ ಪಾಯಿಂಟ್​' ಎಂದರು. ನಂಬಿಕೆ ಅಥವಾ ಧರ್ಮಕ್ಕೆ ಶರಣಾದ ಲವಾಗಿ ಎಲ್ಲರೂ ಪ್ರಶ್ನಿಸುವ ಹಕ್ಕು ಕಳೆದುಕೊಂಡಿದ್ದೇವೆ. ಇದಕ್ಕೂ ಟರ್ನಿಂಗ್​ ಪಾಯಿಂಟ್​ ಬರಬೇಕಿದೆ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ರಾಜಶೇಖರ್​ ಹೆಬ್ಬಾರ್​ ಸಿ. ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು. ಲೇಖಕ ಡಾ.ಬಿ. ಭಾಸ್ಕರ್​ ರಾವ್​ ಉಪಸ್ಥಿತರಿದ್ದರು. ಅತಿಥಿಗಳಿಗೆ ಡಾ. ಸನತ್​ ಭಾಸ್ಕರ್​ ಗೌರವ ಸಮರ್ಪಿಸಿದರು. ಜಿ.ಪಿ. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net