ಬರಹಪೂರ್ವ ಹಸ್ತಪ್ರತಿಗಳ ಕುರಿತು ಬೆಳಕು ಚೆಲ್ಲಬೇಕು : ಡಾ.ವೀರೇಶ ಬಡಿಗೇರ

'Manuscript Training and Awareness Camp'
Published on

ಮೈಸೂರು: ಹಸ್ತಪ್ರತಿ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ, ಬರಹಪೂರ್ವ ಹಸ್ತಪ್ರತಿಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಆಗಬೇಕು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಮತ್ತು ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ವತಿಯಿಂದ ನಗರದ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ’ದಲ್ಲಿ ಮಾತನಾ ಡಿದರು.

ಹಸ್ತಪ್ರತಿ ಬರೆಯುವ ಪೂರ್ವದಲ್ಲಿ ಹಸ್ತಪ್ರತಿಯನ್ನು ಯಾವ ರೀತಿ ತಯಾರು ಮಾಡುತ್ತಾರೆ ಎಂಬುದು ಬಹಳ ಮುಖ್ಯ. ಬರಹಪೂರ್ವ ಹಸ್ತಪ್ರತಿಗಳ ಕುರಿತು ಹೆಚ್ಚಿನ ಅಧ್ಯಯನ ನಡೆದಿಲ್ಲ. ಸುಮಾರು 14 ಸಮುದಾಯಗಳು ಹಸ್ತಪ್ರತಿಯನ್ನು ಸಿದ್ಧಪಡಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವು ಸಮುದಾಯಗಳ ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಫಲಿತವೇ ಹಸ್ತಪ್ರತಿಗಳು. ತಳಸಮುದಾಯಗಳ ದೊಡ್ಡ ಉತ್ಪನ್ನಗಳೇ ಹಸ್ತಪ್ರತಿಗಳು ಎಂದರು.

ಹಂಪಿ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ರವೀಂದ್ರನಾಥ ಮಾತನಾಡಿ, ಹಸ್ತಪ್ರತಿಗಳ ಸರ್ವೇಕ್ಷಣೆ, ಸಂಗ್ರಹ, ಸಂರಕ್ಷಣೆ, ಸೂಚಿ ರಚನೆ, ಅಪ್ರಕಟಿತ ಕೃತಿಗಳ ಪ್ರಕಾಶನ ಕಾರ್ಯವನ್ನು ಹಂಪಿ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಎರಡು ದಶಕದಿಂದ ಮಾಡುತ್ತಾ ಬಂದಿದೆ. ವಿಶ್ವವಿದ್ಯಾಲಯದಲ್ಲಿ 5 ಸಾವಿರ ಹಸ್ತಪ್ರತಿಗಳು ಇವೆ. ಸಾರ್ವಜನಿಕರ ಆಸ್ತಿ ಹಾಗೂ ದೇಶದ ಸಂಪತ್ತಾದ ಹಸ್ತಪ್ರತಿಗಳು ಸಂರಕ್ಷಣೆಯಾಗಬೇಕಾಗಿದೆ ಎಂದು ಹೇಳಿದರು.

ಶಿಬಿರ ಉದ್ಘಾಟಿಸಿದ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಮಾತನಾಡಿ, ಕನ್ನಡದ ಹಸ್ತಪ್ರತಿಗಳು ಸಂರಕ್ಷಣೆ ಆಗಬೇಕಾಗಿದ್ದು, ಇದಕ್ಕೆ ತಂತ್ರಜ್ಞಾನದ ನೆರವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಹಂಪಿ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net