

ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಶ್ರೀ ಮಹಾಲಿಂಗೇಶ್ವರ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ವಾರ್ಷಿಕ ರಥೋತ್ಸವ, ಸಾಂಸ್ಕೃತಿಕ ಸಂಭ್ರಮ ಏ.9ರಿಂದ 14ರ ತನಕ ನಡೆಯಲಿದೆ.
ಈ ಪ್ರಯುಕ್ತ 10ರಿಂದ 14ರವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ತಂತ್ರಿ ಪವಿತ್ರಪಾಣಿ ಗಣೇಶ ಐತಾಳ ಪಾರಂಪಳ್ಳಿ ನೇತೃತ್ವದಲ್ಲಿ ಹಾಗೂ ಶ್ರೀರಾಮ ಪ್ರಸಾದ ಗರಿಕೆಮಠ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ
10ರಂದು ಮುಂಜಾನೆ ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ, ಬಲಿ, ವಾಸ್ತು *ರಾಕ್ಷೆಘ್ನ ಹೋಮ, ರಜ್ಜು ಬಂಧನ, ಉತ್ಸವ ಬಲಿ, 11ರಂದು ಪುಣ್ಯಾಹ ವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರಪಾಲ ಪೂಜೆ, ಮಹಾಪೂಜೆ 12ರಂದು ಪುಣ್ಯಾಹ ವಾಚನ, ಪ್ರಧಾನಹೋಮ, ಕಲಶಾಭಿಷೇಕ, ರಥ ಶುದ್ಧಿಹೋಮ, ರಥ ಪೂಜೆ, ಬಲಿ, ಬೆಳಗ್ಗೆ 11.55ಕ್ಕೆ ರಥಾರೋಹಣ ಮಧ್ಯಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ವಿಶೇಷ ಆಕರ್ಷಣೆಯಾಗಿ ಸಿಡಿಮದ್ದು ಪ್ರದರ್ಶನ, 13ರಂದು ಪ್ರಭೋದೋತ್ಸವ, ಅಷ್ಟಾವಧಾನ ಸೇವೆ ಹೋಮ, ಕಲಶಾಭಿಷೇಕ ಪೂಜೆ, ಬೆಳಗ್ಗೆ 8ಕ್ಕೆ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ನಡೆದು, 14ರಂದು ಸಂಪ್ರೋಕ್ಷಣೆ ನಡೆಯಲಿದೆ.
ಸಾಂಸ್ಕೃತಿಕ ಪರ್ವ
ಏ.9ರಿಂದ 12ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾ ಪುರಸ್ಕಾರ, ಗುರುವಂದನೆ ಯಕ್ಷಗುರು ಶ್ರೀ ಸೀತಾರಾಮ ಶೆಟ್ಟಿ ಕ್ಕೊಕೂರು ಅವರಿಗೆ ಸನ್ಮಾನ ಸಮಾರಂಭ, ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ತಿಳಿಸಿದ್ದಾರೆ.