ಯೂಥ್​ ಪಾರ್ಲಿಮೆಂಟ್​ಗೆ ಮನು ಶೆಟ್ಟಿ ಆಯ್ಕೆ...

Manu Shetty Lead
Published on

ಮಾ.27ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ವಿಕಸಿತ ಭಾರತ ಯುವ ಪಾರ್ಲಿಮೆಂಟ್​ ಸ್ಪರ್ಧೆಯಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ, ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಾ.27ರಂದು ರಾಜ್ಯ ಮಟ್ಟದ ವಿಕಸಿತ ಭಾರತ ಯೂಥ್​ ಪಾರ್ಲಿಮೆಂಟ್​- 2025 ಕಾರ್ಯಕ್ರಮವು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ.

Manu Shetty 2
ಮಾ.22, 23ರಂದು ಮಂಗಳೂರಿನ ಸೈಂಟ್​ ಆಗ್ನೇಸ್​ ಕಾಲೇಜಿನಲ್ಲಿ ನಡೆದ ಮಂಗಳೂರು, ಕೊಡಗು ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ 10 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಸೈಂಟ್​ ಆಗ್ನೇಸ್​ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್​ ಡಾ. ಎಂ.ವೆನಿಸ್ಸಾ ಎ.ಸಿ., ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಿಸಿದರು. ನೆಹರು ಯುವ ಕೇಂದ್ರದ ನೋಡಲ್​ ಅಧಿಕಾರಿ ಲೋಕೇಶ, ಮಂಗಳೂರು ವಿವಿಯ ಎನ್​ಎಸ್​ಎಸ್​ ಸಂಯೋಜಕ ಡಾ. ಶೇಷಪ್ಪ ಅಮೀನ್​ ಮತ್ತು ಸೈಂಟ್​ ಆಗ್ನೇಸ್​ ಎನ್​ಎಸ್​ಎಸ್​ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಉದಯಕುಮಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net