

ಅಳವಂಡಿ: ದಾಸೋಹದ ಪರಿಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ ಹೇಮರಡ್ಡಿ ಮಲ್ಲಮ್ಮ ಆದರ್ಶ ಅನುಕರಣೀಯ ಎಂದು ಶ್ರೀ ಮರುಳಾರಾಧ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆ, ದಾಸೋಹ
ಸಮೀಪದ ಗುಡಗೇರಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ಹೆಣ್ಣಿನ ಮಹತ್ವ ವಿಶ್ವಕ್ಕೆ ಸಾರಿದ್ದಾರೆ. ವಿಶ್ವಕ್ಕೆ ಮಹಾನ್ ದಾರ್ಶನಿಕ ಯೋಗಿ ವೇಮನನ್ನು ಕೊಟ್ಟಂತ ತಾಯಿಯಾಗಿದ್ದು, ಮನುಕುಲದ ಕಲ್ಯಾಣ ಬಯಸಿದ ಶಿವಶರಣೆ ಆಗಿದ್ದಾರೆ ಎಂದರು.
ಭೂದಾನಿ ಪ್ರದೀಪಗೌಡ ಮಾಲಿಪಾಟೀಲ್ ಮಾತನಾಡಿ, ನಾಡಿನ ಶರಣರ ವಾಣಿಗಳು ಮನುಕುಲದ ಏಳಿಗೆಯನ್ನು ಬಯಸುತ್ತವೆ. ಜೀವನದಲ್ಲಿ ಪ್ರತಿಯೊಬ್ಬರು ಕಾಯಕತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕಾಯಕ ಜೀವನದಿಂದ ಮಾತ್ರ ನೆಮ್ಮದಿ, ಶಾಂತಿ ಸಿಗಲಿದೆ ಎಂದರು.
ಪ್ರಮುಖರಾದ ಚನ್ನಪ್ಪ ವುಟಗನೂರ, ರವಿ ಅಂಬಳಿ, ಪಂಪಾಪತಿ, ಸುರೇಶ, ಹೇಮರಡ್ಡಿ, ಶರಣಪ್ಪ, ಉಮೇಶ, ಶರಣಪ್ಪಗೌಡ, ಶರಣಪ್ಪ ತೋಟದ, ಜಗದೀಶ, ಹನುಮಗೌಡ, ಶಂಕ್ರಪ್ಪ, ಅಂದಪ್ಪ, ರಾಯನಗೌಡ, ಮುದಿಯಪ್ಪ, ಶಿವಪ್ಪ ಇತರರಿದ್ದರು.