ಮಂತ್ರಿಮಾಲ್ ಒತ್ತುವರಿ ಸಮೀಕ್ಷೆ ವರದಿ ಸಿದ್ಧ

mantri mall
Published on

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿಮಾಲ್ ಮತ್ತು ಮಂತ್ರಿ ಗ್ರೀನ್ ಅಪಾರ್ಟ್​ವೆುಂಟ್ ಒತ್ತುವರಿಯಾಗಿರುವ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಒತ್ತುವರಿ ಆಗಿರುವುದು ಧೃಡಪಟ್ಟಿದೆ ಎಂದು ಸಮೀಕ್ಷೆಯ ನೇತೃತ್ವ ವಹಿಸಿದ್ದ ಬಿಬಿಎಂಪಿ ವಿಶೇಷ ಆಯಕ್ತ ಜಿ.ಸಿ. ವೃಷಬೇಂದ್ರಮೂರ್ತಿ ತಿಳಿಸಿದ್ದಾರೆ.

ಪಾಲಿಕೆಗೆ ಸೇರಿದ 3.31 ಎಕರೆ ಹಾಗೂ ಹನುಮಂತಪುರ ಗ್ರಾಮದ ಸರ್ವೆ ನಂ.56ರಲ್ಲಿ 37 ಗುಂಟೆ (ಜಕ್ಕರಾಯನಕೆರೆ ಜಾಗ) ಜಾಗವನ್ನು ಒತ್ತುವರಿ ಮಾಡಿಕೊಂಡು ಮಂತ್ರಿಮಾಲ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುಚ್ಚಯ ನಿರ್ವಿುಸಲಾಗಿದೆ.

ಶುಕ್ರವಾರ ಸಮೀಕ್ಷೆ ನಡೆಸಲಾಗಿದ್ದು, ಅದರ ವರದಿಯನ್ನು ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಅವರಿಗೆ ಸಲ್ಲಿಸಲಾಗುವುದು. ನಂತರ ನಿಯಮಾನುಸಾರ ಆಯುಕ್ತರ ಆದೇಶದಂತೆ ತೆರವು ಕಾರ್ಯ ಆರಂಭಿಸಲಾಗುವುದು ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net