ಕೃಷ್ಣ ಮಠಕ್ಕೆ ಮಂತ್ರಾಲಯ ಶ್ರೀ ಭೇಟಿ

udp-29-mantralaya sri
Published on

ಉಡುಪಿ: ಶ್ರೀ ಕೃಷ್ಣಮಠಕ್ಕೆ ಶುಕ್ರವಾರ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಾಧೀಶ ಶ್ರೀಸುಭುದೇಂದ್ರ ಶ್ರೀಪಾದರು ಪಟ್ಟದ ದೇವರೊಂದಿಗೆ ಆಗಮಿಸಿದ್ದು, ವಾದ್ಯಘೋಷಗಳೊಂದಿಗೆ ಸ್ವಾಗತಿಸಲಾಯಿತು.

ಬೆಳಗ್ಗೆ ಉಡುಪಿ ರಥಭೀದಿಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಪಟ್ಟದ ದೇವರ ಪೂಜೆ ನಡೆಸಿದ ಶ್ರೀಗಳು ಎರಡು ದಿನ ಉಡುಪಿಯಲ್ಲಿ ವಾಸ್ತವ್ಯ ಹೂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net