ಮಂತ್ರಾಲಯ ರಾಯರ ಹುಂಡಿಯಲ್ಲಿ 2.74 ಕೋಟಿ ರೂ.ಕಾಣಿಕೆ

Mantralaya Hundi Counting
ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಹುಂಡಿಯಲ್ಲಿನ ಹಣ ಎಣಿಕೆ ಮಾಡುತ್ತಿರುವ ಮಹಿಳೆಯರು.
Published on

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿ ಎಣಿಕೆ ಮಾಡಿದ್ದು, ಏಪ್ರಿಲ್‌ನಲ್ಲಿ 2.74 ಕೋಟಿ ರೂ. ಸಂಗ್ರಹವಾಗಿದೆ. 29 ದಿನಗಳಲ್ಲಿ ಹುಂಡಿಗೆ ಹೆಚ್ಚಿನ ಪ್ರಮಾಣದ ಹಣ ಕಾಣಿಕೆಯಾಗಿ ಬಂದಿದೆ.

ಮಂತ್ರಾಲಯ ಹುಂಡಿಯಲ್ಲಿ 950 ಗ್ರಾಂ ಬೆಳ್ಳಿ ಸಾಮಗ್ರಿ

2.67 ಕೋಟಿ ರೂ. ವಿವಿಧ ಮೌಲ್ಯದ ನೋಟುಗಳು ಹಾಗೂ 6.56 ಲಕ್ಷ ರೂ. ಮೌಲ್ಯದ ನಾಣ್ಯಗಳ ಜತೆಗೆ 71 ಗ್ರಾಂ ಬಂಗಾರ, 950 ಗ್ರಾಂ ಬೆಳ್ಳಿ ಸಾಮಗ್ರಿಗಳು ಹುಂಡಿಯಲ್ಲಿದ್ದವು ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net