

ರಾಯಚೂರು/ಮಂತ್ರಾಲಯ: 12ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿಯವರು ಶುಕ್ರವಾರ ಮಂತ್ರಾಲಯದಲ್ಲಿ ಚಾತುರ್ಮಾಸ್ಯ ವ್ರತದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಇದನ್ನೂ ಓದಿ: ಮಂತ್ರಾಲಯ ಮಠಕ್ಕೆ 3.69 ಕೋಟಿ ರೂ. ಆದಾಯ
ಮಠದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ವಧೀಂದ್ರ ತೀರ್ಥರು ಮತ್ತು ಎಲ್ಲ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಚಾತುರ್ಮಾಸ್ಯದಂದು ಶ್ರೀ ಮಠದಲ್ಲಿ ವಿವಿಧ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ವಿದ್ಯಾಭಾರತಿ ಶ್ರೀಗಳಿಂದ ಚಾತುರ್ಮಾಸ್ಯ ವ್ರತ
ಶ್ರೀ ಅಕ್ಷೋಭ ರಾಮಪ್ರಿಯಾತೀರ್ಥ ಸ್ವಾಮೀಜಿ, ಬಳಗಾರು ಮಠದ ಶ್ರೀಗಳು, ಸೋಸ್ಲೆ ವ್ಯಾಸರಾಯ ಮಠದ ಶ್ರೀ ವಿದ್ಯಾಮನೋಹರತೀರ್ಥ ಸ್ವಾಮೀಜಿ ವ್ರತ ಆಚರಣೆಯಲ್ಲಿ ಭಾಗವಹಿಸಿದ್ದರು.
ಮಂತ್ರಾಲಯ ಮಠದಲ್ಲಿರುವ ಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತದ ವಿಧಿವಿಧಾನಗಳನ್ನು ನೆರವೇರಿಸುತ್ತಿರುವುದು.