ಡಾ. ಮಂತರ್ ಗೌಡ ಕಪ್ ವಾಲಿಬಾಲ್ ಪಂದ್ಯಾವಳಿ

manthar gowda
Published on

ಕುಶಾಲನಗರ:

ಭುವನಗಿರಿ ಶ್ರೀ ಭಕ್ತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಗೆಳೆಯ ಬಳಗದ ವತಿಯಿಂದ ಹಮ್ಮಿಕೊಂಡಿದ ಮೊದಲನೇಯ ವರ್ಷದ ಹೊನಲು ಬೆಳಕಿನ ಡಾ. ಮಂತರ್ ಗೌಡ ಕಪ್ ವಾಲಿಬಾಲ್ ಪಂದ್ಯಾವಳಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಆಟದ ಮೈದಾನದಲ್ಲಿ ಈಚೆಗೆ ನಡೆಯಿತು. ಕ್ರೀಡಾಕೂಟದ ಪೈನಲ್ ಪಂದ್ಯಾವಳಿಯನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂಥ ಕ್ರೀಡಾಕೂಟಗಳು ಆಯೋಜನೆಗೊಳ್ಳುವುದರಿಂದ ಯುವಕರು ಒಂದೆಡೆ ಸೇರುವಿಕೆಯು ಮೂಲಕ ಸ್ನೇಹ ಮನೋಭಾವದ ಮುಖೇನ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತಾನಾಡುತ್ತಾ ಕ್ರೀಡಾ ಕೌಶಲ್ಯದೊಂದಿಗೆ , ಐಕ್ಯತೆ , ಒಗ್ಗೂಡುವಿಕೆ ಮೂಲಕ ಭಾತೃತ್ವದಿಂದ ಬದುಕುವ ಸಂದೇಶವನ್ನು ಕ್ರೀಡಾಕೂಟಗಳು ಕಲಿಸಿಕೊಡುತ್ತವೆ. ಇದರ ಮೂಲಕ ಯುವಕರು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಕಲ್ಪಿಸುತ್ತದೆ ಎಂದರು.

ಪಂದ್ಯಾವಳಿಯಲ್ಲಿ ಆರ್.ಕೆ. ಸ್ಟೆçöÊಕರ್ ಪ್ರಥಮ, ಮಾರುತಿ ಯುತ್ ಪ್ರೆಂಡ್ಸ್ ದ್ವಿತೀಯ, ರಂಜು ಫ್ರೆಂಡ್ಸ್ ಶಿರಂಗಾಲ ತೃತೀಯ ಹಾಗೂ ಟೀಮ್ ಆಗಸ್ಥಿಯಾ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ವಿಜೇತ ತಂಡಗಳಿಗೆ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅನಂತ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಎಸ್. ಆರ್. ಅರುಣ್ ರಾವ್, ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ ಗುಂಡೂರಾವ್, ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಶಾನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಹೆಬ್ಬಾಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರ್, ಭುವನಗಿರಿ ಶ್ರೀ ಭಕ್ತ ಕನಕದಾಸ, ಗೆಳೆಯರ ಬಳಗದ ಅಧ್ಯಕ್ಷ ರವಿ, ಪ್ರಮುಖರಾದ ಅಂಕುಶ್, ಚರಣ್, ಸಂತೋಷ್, ಕಿರಣ್ ಮತ್ತಿತರರು ಇದ್ದರು.

ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net