3 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

manthar
Published on

ಮಡಿಕೇರಿ:

ಮಡಿಕೇರಿ ನಗರದಲ್ಲಿ ಮೂರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಬುಧವಾರ ಭೂಮಿ ಪೂಜೆ ಮಾಡಿದರು. ನಂತರ ಮಾತನಾಡಿ ಶಾಸಕರ ವಿಶೇಷ ಅನುದಾನದಲ್ಲಿ ಒಟ್ಟು ಮೂರು ಕೋಟಿ ರೂ. ಗಳನ್ನು ಮಡಿಕೇರಿ ನಗರದ ಅಭಿವೃದ್ಧಿಗೆ ಮೀಸಲಿರಿಸಲಾಗುವುದು.

ನಗರದ ಎಲ್ಲಾ ರಸ್ತೆಗಳನ್ನು ಉತ್ತಮ ಗುಣಮಟ್ಟದ ಸರ್ವಋತು ರಸ್ತೆ ನಿರ್ಮಾಣದ ಆಶಯ ತಮ್ಮದಾಗಿದ್ದು, ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದರಲ್ಲದೆ

ಏಪ್ರಿಲ್ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿಗಳು ಮುಗಿಯಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಆದ್ಯತೆ ಮೇರೆಗೆ ಮತ್ತಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.

ನಗರದ ಕಾನ್ವೆಂಟ್ ಸಮೀಪ ರಸ್ತೆ, ಎಫ್.ಎಂ.ಸಿ. ಕಾಲೇಜು ಹಿಂಭಾಗದ ರಸ್ತೆ, ಮುಳಿಯ ಬಡಾವಣೆ ರಸ್ತೆ, ಮೋಣಪ್ಪ ಗ್ಯಾರೆಜ್ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ಮುಂಭಾಗದ ರಸ್ತೆ, ಗೌಳಿಬೀದಿ ರಸ್ತೆ, ಬಸಪ್ಪ ಶಿಶುವಿಹಾರ ರಸ್ತೆ, ಅಬ್ದುಲ್ ಕಲಾಂ ಬಡಾವಣೆ ಮೈದಾನದ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಪ್ರಮುಖರಾದ ಹೆಚ್.ಎ. ಹಂಸ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಕಮಿಷನರ್ ರಮೇಶ್, ಸುರಯ್ಯ ಅಬ್ರಾರ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಪ್ರಭು ರೈ, ವಸಂತ ಭಟ್, ಜಿ.ಸಿ. ಜಗದೀಶ್, ಮುದ್ದುರಾಜ್, ಆರ್.ಪಿ. ಚಂದ್ರಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net