

ಮಡಿಕೇರಿ:
ಮಡಿಕೇರಿ ನಗರಕ್ಕೆ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ನಗರಕ್ಕೆ ನೀರು ಪೂರೈಸುವ ಕೂಟು ಹೊಳೆಯಲ್ಲಿರುವ ೩೦೦ ಎಚ್.ಪಿ.ಯ ೨ ಮೋಟಾರ್‌ಗಳ ಪೈಕಿ ಒಂದು ಮೋಟಾರ್ ವಿದ್ಯುತ್ ವ್ಯತ್ಯಯದಿಂದ ಹಾಳಾದ ಕಾರಣ ಸಂಪೂರ್ಣ ಹೊರೆ ಉಳಿದಿರುವ ಮತ್ತೊಂದು ಮೋಟಾರ್ ಮೇಲೆ ಬಿದ್ದು, ಗರಿಷ್ಟ ಉಪಯೋಗ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ೨ನೇ ಮೋಟಾರ್ ಕೂಡ ಕೆಟ್ಟುಹೋಗಿದ್ದು. ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆ ಆಗಿದೆ. ಹಾಗಾಗಿ ಅಗತ್ಯ ಇರುವ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಸರರಾಜು ಆಗುವ ಕೂಟುಹೊಳೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದಿನ ೬ ಗಂಟೆ ಒಳಗೆ ಮೋಟಾರ್ ದುರಸ್ತಿಪಡಿಸಿ ನೀರು ಪೂರೈಕೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.