ಮರು ಡಾಂಬರೀಕರಣಕ್ಕೆ ಚಾಲನೆ

Manthar
Published on

ಕುಶಾಲನಗರ:

ಹಾಸನ ರಾಜ್ಯ ಹೆದ್ದಾರಿಯ ಕೂಡಿಗೆ- ಹೆಬ್ಬಾಲೆ ರಸ್ತೆಯ 3.80 ಕೋಟಿ ರೂ. ವೆಚ್ಚದ ಮರುಡಾಂಬರೀಕರಣ ಮತ್ತು ವಿಭಜಕ ನಿರ್ಮಾಣಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಈಗಾಗಲೇ ಕೂಡಿಗೆ- ಕುಶಾಲನಗರ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಗೊAಡಿದೆ. ಅದೇ ಮಾದರಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆಯ ಕಾಮಗಾರಿ 3.80. ಕೋಟಿ ರೂ. ವೆಚ್ಚದಲ್ಲಿ ಹಾಸನ ಹೆದ್ದಾರಿಯಾದ ಕೂಡಿಗೆ - ಹೆಬ್ಬಾಲೆ ಭಾಗದ ಆಯ್ದ ಭಾಗಗಳಲ್ಲಿ ನಡೆಯಲಿದೆ.

ಈಗಾಗಲೇ ವಿವಿಧ ಯೋಜನೆಯ ಮುಖಾಂತರ ಗ್ರಾಮಾಂತರ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಹೆಚ್ಚು ಹಣ ಕಾಯ್ದಿರಿಸಲಾಗಿದೆ. ಅದರ ಮೂಲಕ ಕ್ರಿಯಾ ಯೋಜನೆ ಪೂರ್ಣಗೊಂಡು ವಿವಿಧ ಹಂತಗಳಲ್ಲಿ ಗ್ರಾಮಾಂತರ ಪ್ರದೇಶದ ರಸ್ತೆಯ ಕಾಮಗಾರಿಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಹಾಸನ ಹೆದ್ದಾರಿ ಮತ್ತು ಸೋಮವಾರಪೇಟೆ ಸಂಪರ್ಕ ರಸ್ತೆಯಾದ ಹಳೆ ಕೂಡಿಗೆ ರಸ್ತೆಯ ಕಾಂಕ್ರೀಟಿಕರಣ ಸಾಧ್ಯದಲ್ಲಿ ಆರಂಭಗೊಳ್ಳುವುದು. ವಿವಿಧ ರಸ್ತೆ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುವುದು ಎಂದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತಾನಾಡಿ ಮಡಿಕೇರಿ ಕ್ಷೇತ್ರದ ಶಾಸಕರು ಈಗಾಗಲೇ ಕುಶಾಲನಗರ ತಾಲೂಕು ವ್ಯಾಪ್ತಿಗೆ ಹೆಚ್ಚಿನ ಅನುದಾನ ನೀಡಿರುತ್ತಾರೆ. ಅದೇ ಮಾದರಿಯಲ್ಲಿ ಕೂಡುಮಂಗಳೂರು, ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆ, ಮತ್ತು ಅನುಷ್ಠಾನಗೊಂಡಿರುವ ಕಾಮಗಾರಿಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು.

ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅನಂತ, ಎಸ್.ಆರ್. ಅರುಣ್ ರಾವ್, ಟಿ.ಪಿ. ಹಮೀದ್, ಮೋಹಿನಿ, ಶಿವಕುಮಾರ್, ಹೆಚ್.ಎಸ್. ರವಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್. ಎಸ್. ಕುಮಾರ್, ಇಂಜಿನಿಯರ್ ಅರ್ಬಾಜ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶೋಭಾ ಪುಟ್ಟಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net