

ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಆಹಾರದ ಕುರಿತು ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾಂಸಾಹಾರವನ್ನು ನೀಡುವ ಮೂಲಕ ಸಮಾನ ಅವಕಾಶ ಸಮಪಾಲಿನ ಸಾಧ್ಯತೆ ವಿಸ್ತರಿಸಬೇಕು ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಉಗ್ರನರಸಿಂಹೇಗೌಡ ಆಗ್ರಹಿಸಿದರು.
ಸಮ್ಮೇಳನದಲ್ಲಿ ಭಾಷೆ ಮುಖ್ಯವೋ, ಆಹಾರ ಮುಖ್ಯವೋ ಎಂಬ ಪ್ರಶ್ನೆಗಳೂ ಮೂಡುತ್ತಿದೆ. ಭಾಷೆಯೂ ಮೊದಲೇ ಆಹಾರದ ಅನ್ವೇಷಣೆಯಾಗಿದೆ. ಮನುಷ್ಯ ಹುಟ್ಟಿನಿಂದಲೂ ಸಸ್ಯಹಾರಿ ಹಾಗೂ ಮಾಂಸಹಾರಿಯೂ ಆಗಿದ್ದು, ಎರಡನ್ನು ಸಮನಾಗಿ ನೋಡಬೇಕಾದದ್ದು ಸಾಹಿತ್ಯದ ಮನೋಧರ್ಮವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ 86 ಸಾಹಿತ್ಯ ಸಮ್ಮೇಳನದಲ್ಲಿಯೂ ಮಾಂಸಾಹಾರ ಸೇರಿಸದೇ ಇರುವುದು ಸಾಹಿತ್ಯ ಪರಿಷತ್ ಮತ್ತು ಸರ್ಕಾರದ ಅವಿವೇಕತನ. ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಸಮ್ಮೇಳನಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನು ಉಣಬಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಮಹದೇವಶಂಕರ, ಶಂಭುಲಿಂಗಸ್ವಾಮಿ ಇದ್ದರು.