

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು. 25ರಂದು ಸಂಜೆ 5.30ಕ್ಕೆ ಮಂಟೇಸ್ವಾಮಿ ಕಾವ್ಯ ಪ್ರಯೋಗ' ನಾಟಕ ಪ್ರದರ್ಶನ, ಸುಗಮ ಸಂಗೀತ, ಶಿಕ್ಷಣ ಸಂಸ್ಥೆ ಸ್ಮರಣೆ, ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆಯನ್ನು ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪಾಲ್ಗೊಳ್ಳುವರು. ಕವಿವ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸುವರು. ಸಂಘದ ಹಿರಿಯ ಸದಸ್ಯರಾದ ಹುಬ್ಬಳ್ಳಿಯ ಚನ್ನಪ್ಪ ಗುರಪ್ಪ ಝಳಕಿ ಮತ್ತು ಇರಸಂಗಪ್ಪ ನಾಗಪ್ಪ ಕುಂಬಾರ ಅವರನ್ನು ಶಾಂತಾ ಸಾಳುಂಕೆ ಗೌರವಿಸುವರು. ಶಿಕ್ಷಣ ಸಂಸ್ಥೆ ಸ್ಮರಣೆಯಲ್ಲಿಮರಾಠಾ ವಿದ್ಯಾಪ್ರಸಾರಕ ಮಂಡಳಿ ಶಿಕ್ಷಣ ಸಂಸ್ಥೆ' ಕುರಿತು ಭಾರತ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅಶೋಕ ಬಿ. ಬಾಬರ ಸ್ಮರಿಸುವರು. ನಗರದ ಎ. ನಿರಂಜನ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.
ನಂತರ ಡಾ. ಶ್ರೀಪಾದ ಭಟ್ ನಿರ್ದೇಶನದ ನಾಟಕ `ಮಂಟೇಸ್ವಾಮಿ ಕಾವ್ಯ ಪ್ರಯೋಗ' ಪ್ರದರ್ಶನಗೊಳ್ಳುವುದು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಹೊರಕೇರಿ ಕಾರ್ಯಕ್ರಮ ಸಂಯೋಜನೆ ಮಾಡುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.