ಡಾ. ಮಂತರ್ ಗೌಡಗೆ ಅಭಿನಂದನಾ ಸಮಾರಂಭ

19MDK07
Published on

ಮಡಿಕೇರಿ:

ಮಡಿಕೇರಿ ಬ್ರಹ್ಮಾಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ ಭಾನುವಾರ ಶಾಸಕ ಡಾ. ಮಂತರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರೀಜೀ ಆಶೀರ್ವದಿಸಿ ಪರಮಾತ್ಮನ ಶಕ್ತಿ ಮತ್ತು ಸ್ಮೃತಿಯಿಂದ ತಮ್ಮ ಕಾರ್ಯದಲ್ಲಿ ವಿಜಯಿಗಳಾಗಿ ಎಂದು ಹಾರೈಸಿ, ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಉಡುಗೊರೆಯೊಂದಿಗೆ ಸನ್ಮಾನಿಸಿದರು.

ನಂತರ ಮಾತನಾಡಿದ ಡಾ. ಮಂತರ್ ಗೌಡ, ನಿಮ್ಮೆಲ್ಲರ ಮಾರ್ಗದರ್ಶನದಿಂದ ಆತ್ಮತೃಪ್ತಿಯ ಕೆಲಸ ಮಾಡುವುದರೊಂದಿಗೆ ಜನಸೇವೆ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎಫ್.ಎಮ್.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ, ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಪ್ರಕಾಶ್, ರಾಜೇಶ್ವರಿ ವಿದ್ಯಾ ಸಂಸ್ಥೆಯ ನಿರ್ದೇಶಕ ಸಚಿನ್ ವಾಸುದೇವ್, ಕೊಡಗು ಡಿ.ಸಿ.ಸಿ. ಬ್ಯಾಂಕ್ ನಿವೃತ್ತ ವ್ಯವಸ್ಥಾಪಕಿ ಪ್ರೇಮಾ ಕರುಂಬಯ್ಯ ಶುಭ ಹಾರೈಸಿದರು.

ಬ್ರಹ್ಮಾಕುಮಾರಿ ಧನಲಕ್ಷ್ಮೀ, ಕೊಡಗು ಜಿಲ್ಲೆಯ ಬ್ರಹ್ಮಾಕುಮಾರೀಸ್ ಶಾಖೆಯ ಎಲ್ಲಾ ರಾಜಯೋಗ ಶಿಕ್ಷಕಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net