ಕರಾವಳಿ ಪ್ರವೇಶಿಸಿದ ಮುಂಗಾರು

Mansoon
Published on

ಮಂಗಳೂರು: ನಿರೀಕ್ಷೆಗೂ ಒಂದು ದಿನ ಮೊದಲೇ ಮುಂಗಾರು ಕರಾವಳಿ ಪ್ರವೇಶಿಸಿದೆ.

ಗುರುವಾರ ಕೇರಳ ಪ್ರವೇಶಿಸಿದ್ದ ಮುಂಗಾರು ಎರಡು ದಿನದಲ್ಲಿ ಅಂದರೆ ಜೂ.5ರ ವೇಳೆಗೆ ಕರಾವಳಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಶುಕ್ರವಾರೇ ಕರಾವಳಿ ಪ್ರವೇಶ ಪಡೆದಿದೆ, ಆದರೆ ಮುಂಗಾರಿಗೆ ಮಳೆ ಜತೆಯಾಗಿಲ್ಲ.

ಮುಂಗಾರು ಆಗಮನ ಮುನ್ಸೂಚನೆಯಾಗಿ ಗುರುವಾರ ರಾತ್ರಿಯಿಂದಲೇ ಕರಾವಳಿಯಾದ್ಯಂತ ಮಳೆಯಾಗಿದೆ. ಶುಕ್ರವಾರ ಬೆಳಗ್ಗಯೂ ವಿವಿಧಡೆ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನವಾಗುತ್ತಿದ್ದಂತೆ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೂ ಆಕಾಶದಲ್ಲಿ ಮೋಡದ ಚಲನೆ ಹೆಚ್ಚಾಗಿ, ಮೋಡ ಕವಿದ ವಾತಾವರಣವಿದೆ. ಹವಾಮಾನ ಇಲಾಖೆ ಕರಾವಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net