ಮುಂಗಾರು ಎದುರಿಸಲು ಜಿಲ್ಲಾಡಳಿತ ಸಜ್ಜು

mansoon
Published on

ಮಡಿಕೇರಿ:

ಕೊಡಗಿನಲ್ಲಿ ಮತ್ತೊಂದು ಮಳೆಗಾಲ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಮೇ ಕೊನೆಯ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಆಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಮಳೆಗಾಲವನ್ನು ಎದುರಿಸಲು ಜಿಲ್ಲಾಡಳಿತ ಈಗಾಗಲೇ ಭರದ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಸಂಭಾವ್ಯ ಪ್ರಾಕೃತಿ ವಿಕೋಪ ಪ್ರದೇಶಗಳ ಪಟ್ಟಿ ಮಾಡಲಾಗಿದ್ದು, ಕಾಳಜಿ ಕೇಂದ್ರಗಳನ್ನೂ ಗುರುತಿಸಲಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಮಾರುತ ಈಗಾಗಲೇ ಅಂಡೋಮಾನ್-ನಿಕೋಬಾರ್ ಪ್ರವೇಶ ಮಾಡಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಳೆಗಾಲ ಎದುರಿಸಲು ಜಿಲ್ಲಾಡಳಿತದ ಮೂಲಕ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಾಗಿದ್ದು, ಮಳೆಗಾಲದ ತಯಾರಿಯ ಅವಲೋಕನ ಮಾಡಲಾಗಿದೆ.

ಕಳೆದ ವರ್ಷ ಜಿಲ್ಲಾಡಳಿತ ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಮಳೆಗಾಲದಲ್ಲಿ ಕೊಡಗಿನಲ್ಲಿ ಯಾವುದೇ ಮಾನವ ಪ್ರಾಣ ಹಾನಿ ಆಗಿರಲಿಲ್ಲ. ಈ ವರ್ಷವೂ ಆದೇ ರೀತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಆಸ್ತಿ-ಪಾಸ್ತಿ ಹಾನಿ ಪ್ರಮಾಣ ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸಂಬAಧಿಸಿದ ಎಲ್ಲಾ ಇಲಾಖೆಗಳ ಮಧ್ಯೆ ಸಮನ್ವಯತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎನ್‌ಡಿಆರ್‌ಎಫ್ ತಂಡದ ಜೊತೆ ಸಮನ್ವಯ ಸಾಧಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಔಷಧಿಗಳನ್ನು ದಾಸ್ತಾನು ಮಾಡಿಕೊಂಡು ಮುಂಗಾರು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳು ತಮ್ಮ ತಮ್ಮ ವ್ಯಾಪ್ತಿಯ ರಸ್ತೆಯನ್ನು ಸರಿಪಡಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ.

ಈ ಮಧ್ಯೆ ಜಿಲ್ಲೆಯ ಸಂಭಾವ್ಯ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಗಳನ್ನು ಜಿಲ್ಲಾಡಳಿತದಿಂದ ಗುರುತಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಅನಾಹುತಗಳು, ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿ, ಹವಾಮಾನ ಇಲಾಖೆ ಮುನ್ಸೂಚನೆ ಆಧಾರದಲ್ಲಿ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರ ಜತೆಗೆ ಒಂದು ವೇಳೆ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಸಂತ್ರಸ್ತರಿಗೆ ಆಶ್ರಯ ಕೊಡಲು ಕಾಳಜಿ ಕೇಂದ್ರ ತೆರೆಯಬಹುದಾದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮಡಿಕೇರಿ ತಾಲೂಕು ಸಂಪಾಜೆ ಹೋಬಳಿಯಲ್ಲಿ ಶಕ್ತಿನಗರ ನವಗ್ರಾಮ, ಕೊಯನಾಡು, ಜೋಡುಪಾಲ, ಕಾಟಕೇರಿ ಹಾಗೂ ಉಡೋತ್ ಮೊಟ್ಟೆ ಗ್ರಾಮಗಳನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ. 85 ಕುಟುಂಬಗಳ 297 ಜನರನ್ನು ಸ್ಥಳಾಂತರ ಮಾಡಬೇಕಾಗಬಹುದು. ಭಾಗಮಂಡಲ ಹೋಬಳಿಯಲ್ಲಿ ಭಾಗಮಂಡಲ, ತಾವೂರು, ಚೇರಂಗಾಲ, ಕೋರಂಗಾಲ, ತಣ್ಣಿಮಾನಿ, ಪದಕಲ್ಲು, ಕಡಿಯತ್ತೂರು ಗ್ರಾಮಗಳು ಅಪಾಯಕಾರಿ ಪ್ರದೇಶಗಳಾಗಿವೆ. ಇಲ್ಲಿ 87 ಕುಟುಂಬಗಳ 272 ಜನರನ್ನು ಸ್ಥಳಾಂತರಿಸಬೇಕಾಗಬಹುದು.

ನಾಪೋಕ್ಲು ಹೋಬಳಿಯಲ್ಲಿ ಚೆರಿಯಪರಂಬು ಪೈಸಾರಿ, ಚೆರಿಯಪರಂಬು ಖಾಸಗಿ, ಬಲಮುರಿ, ದೊಡ್ಡಪುಲಿಕೋಟು, ಎಮ್ಮೆಮಾಡು, ಕಡಗದಾಳು, ವಾಟೆಕಾಡು, ಕಣ್ವಬಲಮುರಿ, ಕೊಟ್ಟಮುಡಿ ಗ್ರಾಮಗಳು ಅಪಾಯಕಾರಿ ಪ್ರದೇಶಗಳಾಗಿವೆ. ಇಲ್ಲಿಯ 284 ಕುಟುಂಬಗಳ 967 ಜನರನ್ನು ಸ್ಥಳಾಂತರಿÀಸಬೇಕಾಗಬಹುದು. ಮಡಿಕೇರಿ ಹೋಬಳಿಯಲ್ಲಿ ನಿಡುವಟ್ಟು, ಕಾಲೂರು, ಬಾರಿ ಬೆಲ್ಲಚ್ಚು, ಗಾಳಿಬೀಡು, 2ನೇ ಮೊಣ್ಣಂಗೇರಿ, ಕಾಂತೂರು, ಎಂ.ಬಾಡಗ, ಕೋಡಂಬೂರು, ಐಕೊಳ, ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಪರಂಬು ಪೈಸಾರಿ, ಎಸ್. ಕಟ್ಟೆಮಾಡು, ಹೆಬ್ಬಟ್ಟಗೇರಿ ಗ್ರಾಮಗಳನ್ನು ಅಪಾಯಕಾರಿ ಪ್ರದೇಶಗಳನ್ನಾಗಿ ಗುರುತಿಸಲಾಗಿದ್ದು, ಈ ವ್ಯಾಪ್ತಿಯ 402 ಕುಟುಂಬಗಳ 1,331 ಜನರನ್ನು ಸ್ಥಳಾಂತರ ಮಾಡಬೇಕಾಗಬಹುದು.

ಮಡಿಕೇರಿ ನಗರದಲ್ಲಿ ಚಾಮುಂಡೇಶ್ವರಿ ನಗರ, ಇಂದಿರಾನಗರ, ಮಂಗಳಾದೇವಿ ನಗರ, ಸುಬ್ರಹ್ಮಣ್ಯ ನಗರ, ಮಲ್ಲಿಕಾರ್ಜುನ ನಗರ ಮುತ್ತಪ್ಪ ದೇವಸ್ಥಾನ ಹತ್ತಿರ, ತ್ಯಾಗರಾಜ ಕಾಲೋನಿ ಹಾಗೂ ಪುಟಾಣಿ ನಗರವನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ 381 ಕುಟುಂಬಗಳ 1,648 ಜನರನ್ನು ಸ್ಥಳಾಂತರಿಸಬೇಕಾಗಬಹುದು ಎಂದು ಜಿಲ್ಲಾಡಳಿತ ನಿರ್ಧರಿಸಿದೆ.

ವಿರಾಜಪೇಟೆ ತಾಲೂಕಿನಲ್ಲಿ ಅಮ್ಮತ್ತಿ ಹೋಬಳಿಯ ಕರಡಿಗೋಡು, ಗುಹ್ಯ, ಕೊಂಡAಗೇರಿ, ಹಚ್ಚಿನಾಡು ಗ್ರಾಮಗಳು ಅಪಾಯಕಾರಿ ಪ್ರದೇಶಗಳಾಗಿದ್ದು, ಇಲ್ಲಿಯ 213 ಕುಟುಂಬಗಳ 922 ಜನರನ್ನು ಸ್ಥಳಾಂತರಿಸಬೇಕಾಗಬಹುದು. ವಿರಾಜಪೇಟೆ ಹೋಬಳಿಯಲ್ಲಿ ತೋರ, ವಿ ನಾಲ್ಕೇರಿ, ಪುರಸಭೆ ವ್ಯಾಪ್ತಿಯ ಅಯ್ಯಪ್ಪ ಬೆಟ್ಟ, ನೆಹರೂ ನಗರ ಪ್ರದೇಶಗಳನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದ್ದು, ಇಲ್ಲಿಯ 178 ಕುಟುಂಬಗಳ 640 ಜನರನ್ನು ಸ್ಥಳಾಂತರಿಸಬೇಕಾಗಬಹುದು.

ಪೊನ್ನಂಪೇಟೆ ತಾಲೂಕು ಪೊನ್ನಂಪೇಟೆ ಹೋಬಳಿಯಲ್ಲಿ ಗೋಣಿಕೊಪ್ಪಲು 2ನೇ ಬ್ಲಾಕ್, ಬಸವೇಶ್ವರ ಬಡಾವಣೆ, ಚನ್ನಂಗೊಲ್ಲಿ, ನಿಡುಗುಂಬ ಅಪಾಯಕಾರಿ ಪ್ರದೇಶಗಳಾಗಿದ್ದು, ಇಲ್ಲಿ 131 ಕುಟುಂಬಗಳ 492 ಜನರನ್ನು ಸ್ಥಳಾಂತರಿಸಬೇಕಾಗಬಹುದು. ಬಾಳೆಲೆ ಹೋಬಳಿಯಲ್ಲಿ ಸುಳುಗೋಡು ಮತ್ತು ದೇವನೂರು ಬಿ ಗ್ರಾಮಗಳು ಅಪಾಯಕಾರಿ ಪ್ರದೇಶಗಳಾಗಿದ್ದು, 5 ಕುಟುಂಬಗಳ 21 ಜನರನ್ನು ಸ್ಥಳಾಂತರ ಮಾಡಬೇಕಾಗಬಹುದು. ಹುದಿಕೇರಿ ಹೋಬಳಿಯಲ್ಲಿ ಕುಡಚಿ ಸೇತುವೆ, ನೀಟ್‌ಕುಂದ, ಹೊಸಕೊಲ್ಲಿ, ಕಾವೇರಿ ಬಡಾವಣೆ ಅಪಾಯಕಾರಿ ಪ್ರದೇಶಗಳಾಗಿದ್ದು, 55 ಕುಟುಂಬಗಳ 172 ಜನರನ್ನು ಸ್ಥಳಾಂತರಿಸಬೇಕಾಗಬಹುದು

ಸೋಮವಾರಪೇಟೆ ತಾಲೂಕು ಸೋಮವಾರಪೇಟೆ ಹೋಬಳಿಯಲ್ಲಿ ದುದ್ದುಗಲ್ಲು, ಐಗೂರು, ಚಂದಾಣಿ ಬಾಣೆ, ಕೊರಮೊಟ್ಟ ಬಾಣೆ, ಕೆಳಗಳ್ಳಿ ಮತ್ತು ಊರು ಬೆಟ್ಟ, ಮಕ್ಕಳಗುಡಿ ಬೆಟ್ಟ ಗ್ರಾಮಗಳು ಅಪಾಯಕಾರಿ ಪ್ರದೇಶದಲ್ಲಿದ್ದು, 81 ಕುಟುಂಬಗಳ 269 ಜನರನ್ನು ಸ್ಥಳಾಂತರಿಸಬೇಕಾಗಬಹುದು. ಶಾಂತಳ್ಳಿ ಹೋಬಳಿಯಲ್ಲಿ ಶಾಂತಳ್ಳಿ, ತಲ್ತಾರೆ ಶೆಟ್ಟಳ್ಳಿ, ಕೂತಿ, ಕೊತ್ತನಳ್ಳಿ ಹಾಗೂ ಕೊಡ್ಲಿಪೇಟೆ ಹೋಬಳಿಯಲ್ಲಿ ಬ್ಯಾಡಗೊಟ್ಟ ಗ್ರಾಮವನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ. ಇಲ್ಲಿ 32 ಕುಟುಂಬಗಳ 100 ಜನರನ್ನು ಸ್ಥಳಾಂತರಿಸಬೇಕಾಗಬಹುದು.

ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿಯಲ್ಲಿ ಹಾಲೇರಿ, ಕೊಪ್ಪತ್ತೂರು, ಇಗ್ಗೋಡ್ಲು, ಹಾಡಗೇರಿ, ಜಂಬೂರು, ಮೂವತ್ತೊಕ್ಲು, ಕಿರುದಲೆ, ಚೇರಳ ಶ್ರೀಮಂಗಲ, ಈರಳ ವಳಮುಡಿ, ಅತ್ತೂರು ನಲ್ಲೂರು ಗ್ರಾಮಗಳು ಅಪಾಯಕಾರಿ ಪ್ರದೇಶದಲ್ಲಿದ್ದು, 110 ಕುಟುಂಬಗಳ 382 ಜನರನ್ನು ಸ್ಥಳಾಂತರಿಸಬೇಕಾಗಬಹುದು. ಕುಶಾಲನಗರ ಹೋಬಳಿಯಲ್ಲಿ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಬಸವನಹಳ್ಳಿ, ಮಾದಾಪಟ್ಟಣ, ವಾಲ್ನೂರು ತ್ಯಾಗತ್ತೂರು, ನೆಲ್ಯಹುದಿಕೇರಿ, ಕಣಿವೆ, ನಂಜರಾಯಪಟ್ಟಣ, ಕೂಡಿಗೆ, ಹೆಗ್ಗಡಹಳ್ಳಿ, ಹುದುಗೂರು, ಹುಲುಗುಂದ, ಕೂಡ್ಲೂರು, ಬಸವನತ್ತೂರು ಗ್ರಾಮಗಳು ಅಪಾಯಕಾರಿ ಪ್ರದೇಶಗಳಾಗಿದ್ದು, 573 ಕುಟುಂಬಗಳ 2,045 ಜನರನ್ನು ಸ್ಥಳಾಂತರಿಸಬೇಕಾಗಬಹುದು.

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ಮಾರ್ಕೆಟ್ ರಸ್ತೆ, ತ್ಯಾಗರಾಜ ರಸ್ತೆ, ಆದಿಶಂಕರಾಚಾರ್ಯ ಬಡಾವಣೆ, ಕೊಪ್ಪ ಗೇಟ್, ಸಿಂಗಾರಮ್ಮ ಬಡಾವಣೆ, ಶೈಲಜಾ ಬಡಾವಣೆ, ದಂಡಿನಪೇಟೆ, ಶಾಂತಿ ಮಾರ್ಗ, ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ, ಸಾಯಿ ಬಡಾವಣೆ, ಬಸಪ್ಪ ಬಡಾವಣೆ, ಇಂದಿರಾ ಬಡಾವಣೆ, ಬಿದ್ದಪ್ಪ ಬಡಾವಣೆ, ತಾವರೆಕೆರೆ ಬಳಿ ಹಾಗೂ ಗಂಧದ ಕೋಟೆ, ನಿಜಾಮುದ್ದೀನ್ ಬಡಾವಣೆ,

ನಿಂಗೇಗೌಡ ಬಡಾವಣೆ, ಪಂಪ್ ಹೌಸ್ ರಸ್ತೆ ಯೋಗಾನಂದ ಬಡಾವಣೆ ಅಪಾಯಕಾರಿ ಪ್ರದೇಶಗಳಾಗಿದ್ದು, 347 ಕುಟುಂಬಗಳ 1,366 ಜನರನ್ನು ಸ್ಥಳಾಂತರಿಸಬೇಕಾಗಬಹುದು ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

=====

ಕೊಡಗಿನಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮಳೆಗಾಲ ಶುರುವಾದರೆ ಜುಲೈ, ಆಗಸ್ಟ್ ತಿಂಗಳಿನಲ್ಲಿ ವರುಣನ ಅಬ್ಬರ ಮತ್ತಷ್ಟು ಬಿರುಸು ಪಡೆದುಕೊಳ್ಳುತ್ತದೆ. 2018, 2019 ಹಾಗೂ 2020ರಲ್ಲಿ ಆಗಸ್ಟ್ ತಿಂಗಳಿನಲ್ಲೇ ಕೊಡಗಿನಲ್ಲಿ ಪ್ರಾಕÊತಿಕ ವಿಕೋಪ ಸಂಭವಿಸಿತ್ತು. 2018ರಲ್ಲಿ ಹಿಂದೆAದೂ ನೋಡಿರದಂತಹ ರೀತಿಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಬೆಟ್ಟ ಕುಸಿದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. 2019ರಲ್ಲಿ ಮೇಘಸೋಟದ ರೀತಿಯಲ್ಲಿ ಮಳೆ ಸುರಿದು ನದಿಗಳಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಮಂದಿ ಬೀದಿಗೆ ಬಿದ್ದಿದ್ದರು. 2020ರಲ್ಲೂ ಬಹುತೇಕ ಇದೇ ಪರಿಸ್ಥಿತಿ ಪುನರಾವರ್ತನೆ ಆಗಿತ್ತು. ಈ ಮೂರು ವರ್ಷಗಳಲ್ಲಿ ಭಾರೀ ಹಾನಿ ಆಗಿದ್ದ ಹಿನ್ನೆಲೆಯಲ್ಲಿ ಮಳೆಗಾಲವನ್ನು ಆತಂಕದಿAದಲೇ ಎದುರು ನೋಡುವ ಪರಿಸ್ಥಿತಿ ಕೊಡಗಿನಲ್ಲಿ ಇದೆ.

====

ಕೊಡಗಿನಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತÀ ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮುಂಗಾರು ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಜಾನುವಾರು ಹಾನಿಯಾಗದಂತೆ ಎಚ್ಚರ ವಹಿಸಬೇಕು. ಈ ಸಂಬAಧ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net