ಮಾನ್ಸಿ ಸುವರ್ಣಗೆ ಕಂಚಿನ ಪದಕ

udp-13-mansi
Published on

ಉಡುಪಿ: ಉತ್ತರ ಪ್ರದೇಶದ ಗ್ರೇಟರ್​ ನೊಯಿಡಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಬಾಕ್ಸಿಂಗ್​ ಚಾಂಪಿಯನ್​ಷಿಪ್​ನಲ್ಲಿ ಮಲ್ಪೆ ನಿವಾಸಿ ಮಾನ್ಸಿ ಜೆ. ಸುವರ್ಣ ಕಂಚಿನ ಪದಕ ಗೆದ್ದಿದಾರೆ.

ಮೀನುಗಾರಿಕೆಯಲ್ಲಿ ತೊಡಗಿರುವ ಮಲ್ಪೆಯ ಮಾಲತಿ ಹಾಗೂ ಜಗದೀಶ್​ ಸುವರ್ಣ ದಂಪತಿ ಪುತ್ರಿ ಮಾನ್ಸಿ, ಪ್ರಸ್ತುತ ಕೇಂದ್ರ ಸರ್ಕಾರದ ಸ್ಪೋರ್ಟ್ಸ್​ ಅಥಾರಿಟಿ ಆ್​ ಇಂಡಿಯಾ ಅಧೀನದಲ್ಲಿರುವ ಗೋವಾದ ಸೈಂಟ್​ಮೇರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸಗೈಯುತ್ತಿದ್ದಾರೆ. 3ನೇ ತರಗತಿಯಿಂದಲೂ ಬಾಕ್ಸಿಂಗ್​ನಲ್ಲಿ ಆಸಕ್ತಿ ಹೊಂದಿದ ಈಕೆ 10 ವರ್ಷ ಒಳಗಿನ ಹುಡುಗಿಯರ ಬಾಕ್ಸಿಂಗ್​ ಚಾಂಪಿಯನ್​ಷಿಪ್​ನಲ್ಲಿ ಪ್ರಥಮ ಬಾರಿಗೆ ಚಿನ್ನದ ಪದಕಗಳಿಸಿದ್ದರು.

ಸಚಿವೆ ಅಭಿನಂದನೆ

ಮಾನ್ಸಿ ಸಾಧನೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳಕರ್​ ಶ್ಲಾಘಿಸಿದ್ದಾರೆ. ಕಂಚಿನ ಪದಕ ಗೆದ್ದರಿರುವುದು ರಾಜ್ಯದ ಇತರ ಬಾಕ್ಸರ್​ಗಳಿಗೆ ಸ್ಫೂರ್ತಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಾಕ್ಸಿಂಗ್​ ಕ್ರೀಡೆ ವಿರಳ. ಈ ಕ್ರೀಡೆ ಮತ್ತಷ್ಟು ಬೆಳೆಯಬೇಕು. ಮಕ್ಕಳು ಬಾಕ್ಸಿಂಗ್​ನಲ್ಲಿ ಮಿಂಚಬೇಕು. ಮಾನ್ಸಿ ಸುವರ್ಣ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳನ್ನು ಗಳಿಸಲಿ. ಆಕೆಯ ಸಾಧನೆಗೆ ನಮ್ಮ ಸರ್ಕಾರ ಸದಾ ಬೆನ್ನೆಲುಬು ಆಗಿ ನಿಲ್ಲಲಿದೆ ಎಂದು ಸಚಿವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net