ಮನ್ಸಲಾಪುರ ರಸ್ತೆ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ ಸುಕ್ಷೇತ್ರ ಹೆಸರಿಡಲು ಒತ್ತಾಯ

raichur
raichur
Published on

ರಾಯಚೂರು ತಾಲೂಕಿನ ಮನ್ಸಲಾಪೂರ ಗ್ರಾಮದ ರಸ್ತೆಗೆ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ ಸುಕ್ಷೇತ್ರ ಮನ್ಸಲಾಪೂರ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಮಂಗಳವಾರ ಮನ್ಸಲಾಪೂರ ಗ್ರಾಮಸ್ಥರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೊಪಾತ್ರರಿಗೆ ಮನವಿ ಸಲ್ಲಿಸಿದರು.

ನಗರದ ಗೋಶಾಲೆ ರಸ್ತೆಯಿಂದ ಕೇವಲ 4 ಕಿ.ಮೀ. ಅಂತರದಲ್ಲಿರುವ ಐತಿಹಾಸಿಕ ಪರಂಪರೆಯ ದೇವಾಲಯಗಳು ಈ ಗ್ರಾಮದಲ್ಲಿ ಇರುವುದರಿಂದ ಶ್ರೀಶೈಲ ಪೀಠದ ರೀತಿಯಲ್ಲಿ ಪ್ರಸಿದ್ಧಿ ಹೊಂದಿದೆ. ಪುರಾತನವಾದ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧಿ ಪಡೆದಿದೆ, ಪುರಾತನ ಐತಿಹಾಸಿಕ ದೇವಸ್ಥಾನ ಇರುವ ಈ ಮನ್ಸಲಾಪೂರ ಗ್ರಾಮಕ್ಕೆ ಸುಕ್ಷೇತ್ರ ಸಿದ್ದಲಿಂಗೇಶ್ವರ ರಸ್ತೆ ಎಂದು ನಾಮಕರಣ ಮಾಡಲು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಬೋರಡ್ಡಿ, ಉಪಾಧ್ಯಕ್ಷ ಉಮಾ ಸಿದ್ದಲಿಂಗಯ್ಯ, ಸದಸ್ಯರಾದ ನಾಗಮ್ಮ ಬೂದೆಪ್ಪ,ದಂಡಪ್ಪ ತಿಮ್ಮಯ್ಯ, ಈರಮ್ಮ ಹುಲಿಗೆಪ್ಪ, ಈಶ್ವರಿ ಅಂಜಿನಯ್ಯ, ಕಿರಣ ಶಿವಪ್ಪ, ಗ್ರಾಮದ ಮುಖಂಡರಾದ ಸಿದ್ದಪ್ಪಗೌಡ ಮಾಲಿ ಪಾಟೀಲ್, ಶಂಕರ್ ರೆಡ್ಡಿ ಗೌಡ, ಬನಶಂಕರಯ್ಯ ಸ್ವಾಮಿ, ಸೈಯದ್ ಸಾಬ್, ಶಶಿಧರ್ ಪಾಟೀಲ್, ಸಿದ್ದಯ್ಯಸ್ವಾಮಿ, ಅಭಿಷೇಕ್ ರೆಡ್ಡಿ, ಲಿಂಗಯ್ಯ ದಿಡ್ಡಿ, ರಾಮರೆಡ್ಡಿ ಗೌಡ, ಶಿವರಾಜ ಹೊಸಪೇಟೆ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net