

ಮಾಗಡಿ : ದೇವಾಲಯಗಳು ಪೂರ್ವಿಕರ ಕಾಲದಿಂದಲೂ ನಿರ್ಮಿಸಿಕೊಂಡು, ಜೀರ್ಣೋದ್ಧಾರ ಮಾಡಿಕೊಂಡು ಬರಲಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ಚಕ್ರಭಾವಿ ಗ್ರಾಮದ ಶ್ರೀನಾಡಮಾರಮ್ಮದೇವಿ ಶಿಲಾಮಯ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೀರ್ಣೊದ್ಧಾರ, ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದ ಅವರು, ಮನುಷ್ಯ ಸಂಪತ್ತು, ಆಸ್ತಿಯಿಂದ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಆದರೆ, ಮನುಷ್ಯನ ನೆಮ್ಮದಿ ತಾಣ ದೇವಾಲಯ. ಗ್ರಾಮಸ್ಥರು ಒಗ್ಗೂಡಿ ದೇವಾಲಯ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಚಕ್ರಭಾವಿ ಗ್ರಾಮದ ರಸ್ತೆ, ಚರಂಡಿ ಅಭಿವೃದ್ಧಿಗೆ 1.50 ಕೋಟಿ ರೂ. ನೀಡಿದ್ದು, ಮತ್ತೆ 1.50 ಕೋಟಿ ರೂ. ನೀಡುತ್ತೇನೆ. ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿಗಾಗಿ ಅನುದಾನ ತರಲುಕ್ರಮ ಕೈಳ್ಳಲಾಗುವುದು ಎಂದರು.
ಡಿ.ಕೆ.ಸುರೇಶ್ ಸಂಸದರಾದ ಸಂದರ್ಭದಲ್ಲಿ ಗ್ರಾಮಕ್ಕೆ ಲಿಪ್ಟ್ ಇರಿಗೇಷನ್ ಮಂಜೂರು ಮಾಡಿಸಿದರು. ಈಗ ಟೆಂಡರ್ ಹಂತದಲ್ಲಿದೆ, ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ದಿನೇಶ್ ಗುಂಡೂರಾವ್ ಶಂಕುಸ್ಥಾಪನೆ ನೆರವೇರಿಸಲಿದ್ದೇವೆ ಎಂದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಡಾ. ನಿಶ್ಚಲಾನಂದ ಸ್ವಾಮೀಜಿ, ಚಕ್ರಭಾವಿ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯ ನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು.
ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್. ಅಶೋಕ್, ಜೆಪಿ. ಪೌಂಡೇಷನ್ ಸಂಸ್ಥಾಪಕ ಜೆ.ಪಿ. ಚಂದ್ರೇಗೌಡ, ತಾಪಂ ಮಾಜಿ ಸದಸ್ಯೆ ರತ್ನಮ್ಮ, ಕೋರಮಂಗಲ ಶ್ರೀನಿವಾಸ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಸುದೀಂದ್ರ, ಬಸವರಾಜು, ಬೈರೇಶ್, ಶ್ರೀಧರ್, ಆನಂದ್, ಪಂಚಾಕ್ಷರಿ, ಬೆಟ್ಟೇಗೌಡ, ಮೂರ್ತಿ, ಸ್ವಾಮಿ, ದತ್ತ ಮೂರ್ತಿ, ದೀಪು, ಯಶೋಧಮ್ಮ, ನರಸಿಂಹಮೂರ್ತಿ, ಸೀಗೆಕುಪ್ಪೆ ಶಿವಣ್ಣ ಇತರರು ಇದ್ದರು.