ಮನುಷ್ಯನ ದುರಾಸೆಯಿಂದ ಪರಿಸರ ನಾಶ

6 HRP 01
ಹರಪನಹಳ್ಳಿ ತಾಲೂಕು ಕುರುಬ ಸಮಾಜದ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಕಾಗಿನೆಲೆ ಕನಕ ಗುರುಪೀಠದ ತಿಂಥಿಣಿ ಬ್ರಿಜ್ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಧರ್ಮದರ್ಶಿ ಎಚ್.ಬಿ.ಪರಶುರಾಮಪ್ಪ, ತಾಲೂಕು ಅಧ್ಯಕ್ಷ ವಕೀಲ ಬಂಡ್ರಿ ಗೋಣಿಬಸಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮುತ್ತಿಗಿ ಜಂಬಣ್ಣ, ಪುರಸಭೆ ಸದಸ್ಯ ಜೋಗಿನರ ಭರತೇಶ, ಬಳ್ಳಾರಿಯ ವಕೀಲ ಕಾಮೇಶ, ಪರಶುರಾಮ, ಖಂಡೆಪ್ಪ ಇತರರಿದ್ದರು.
Published on

ಹರಪನಹಳ್ಳಿ: ಹಾಲುಮತ ಸಮುದಾಯದ ಕಂಬಳಿ ಧಾರ್ಮಿಕ ಪರಂಪರೆಯ ಆಧಾರ ಸ್ತಂಭ ಎಂದು ಕಾಗಿನೆಲೆ ಕನಕ ಗುರುಪೀಠದ ತಿಂಥಿಣಿ ಬ್ರಿಜ್ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಕೊಟ್ಟೂರು ರಸ್ತೆ ಬಳಿಯ ತಾಲೂಕು ಕುರುಬ ಸಮಾಜದ ಸಂಘದ ಕಚೇರಿಯಲ್ಲಿ ಶ್ರಾವಣ ಮಾಸದ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮ-ಸಂಸ್ಕೃತಿ ಆಚಾರ-ವಿಚಾರದಲ್ಲಿ ಹಾಲುಮತ ಸಮುದಾಯ ಯಾವತ್ತು ಮುಂದಿದೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಿದ್ದಾನೆ. ಸಂಸ್ಕೃತಿಯನ್ನು ಬಿಟ್ಟು ಬದುಕಿದರೆ ನಾವು ಅನಾಥರಾಗುತ್ತೇವೆ. ಪ್ರತಿಯೊಬ್ಬರೂ ತಮ್ಮ ಮನೆ ದೇವರ ವಾರದ ದಿನ ಮಡಿಯಿಂದ ಇದ್ದು ಆಚರಣೆ ಮಾಡಬೇಕು. ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡಬಾರದು.

ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಬೇಕು. ಇಂದು ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗುತ್ತಿದೆ. ಪರಿಸರ ಉಳಿದರೆ ಮಾತ್ರ ನಾವು ಬದುಕಿರಲು ಸಾಧ್ಯ ಹಾಗಾಗಿ ನಾವೆಲ್ಲಾರೂ ಪರಿಸರ ಬೆಳೆಸಲು ಮುಂದಾಗೋಣ. ಸಮುದಾಯದ ಬಂಧುಗಳು ಸಮಾಜವನ್ನು ಸಂಘಟಿಸುವ ಮೂಲಕ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net