ಸಂಘಟನೆಯ ಬೇಡಿಕೆ ಈಡೇರಿಸಲು ಬದ್ಧ

Untitled design (5)
ಸಿಂಧನೂರಿನ ತಾಪಂ ಸಭಾಂಗಣದಲ್ಲಿ ಶುಕ್ರವಾರ ಗ್ರಾಪಂ ಪಿಡಿಒಗಳ, ಸಂಘಟಕರ ಸಭೆ ನಡೆಯಿತು. ತಾಪಂ ಮನರೇಗಾ ಸಹಾಯಕ ನಿರ್ದೇಶಕ ಆಲಂಬಾಷಾ, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸಂಚಾಲಕ ನಾಗರಾಜ ಪೂಜಾರ್, ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಆರ್.ಎಚ್ ಕಲಮಂಗಿ, ಅಯರ್ಲಾ ತಾಲೂಕು ಘಟಕದ ಅಧ್ಯಕ್ಷ ಪಂಪಾಪತಿ ಬೆಳಗುರ್ಕಿ, ಹುಲ್ಲೇಶ ರೈತನಗರಕ್ಯಾಂಪ್ ಇದ್ದರು.
Published on

ಸಿಂಧನೂರು: ನಗರದ ತಾಪಂ ಸಭಾಂಗಣದಲ್ಲಿ ತಾಪಂ ಮನರೇಗಾ ಸಹಾಯಕ ನಿರ್ದೇಶಕ ಆಲಂಬಾಷಾ ನೇತೃತ್ವದಲ್ಲಿ ಶುಕ್ರವಾರ ಗ್ರಾಪಂ ಪಿಡಿಒಗಳ, ಸಂಘಟಕರ ಸಭೆ ಜರುಗಿತು.

ಗ್ರಾಮೀಣ ಪ್ರದೇಶದಲ್ಲಿ ಮನರೇಗಾ ಯೋಜನೆ ಸಮರ್ಪಕ ಅನುಷ್ಠಾನವಾಗಿಲ್ಲ

ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸಂಚಾಲಕ ನಾಗರಾಜ ಪೂಜಾರ್ ಮಾತನಾಡಿ, ಬರಗಾಲದಿಂದ ತಾಲೂಕಿನಲ್ಲಿ ಗುಳೆ ಸಮಸ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನರೇಗಾ ಯೋಜನೆ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ವಸತಿ ಯೋಜನೆಗಳು ನನೆಗುದಿ ಬಿದ್ದಿವೆ. ಜನರು ಕುಡಿವ ನೀರು, ರಸ್ತೆ, ವಸತಿ ಸೇರಿದಂತೆ ಮೂಲ ಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಸಂಘಟನೆಯ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸಹಾಯಕ ನಿರ್ದೇಶಕ ಆಲಂಬಾಷಾ ಮಾತನಾಡಿ, ಸಂಘಟನೆಯಿಂದ ಸಲ್ಲಿಸಿದ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಿಪಿಐ(ಎಂಎಲ್) ಲಿಬರೇಶನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಆರ್.ಎಚ್ ಕಲಮಂಗಿ, ಅಯರ್ಲಾ ತಾಲೂಕು ಘಟಕದ ಅಧ್ಯಕ್ಷ ಪಂಪಾಪತಿ ಬೆಳಗುರ್ಕಿ, ಹುಲ್ಲೇಶ ರೈತನಗರಕ್ಯಾಂಪ್, ರವಿಕುಮಾರ್, ಪರಶುರಾಮ ಭಂಡಾರಿ, ಮಹಾದೇವ ಅಮರಾಪುರ, ಹುಲ್ಲೇಶ ವೀರಾಪುರ, ಅಲಬನೂರು, ಇ.ಜೆ.ಹೊಸಳ್ಳಿ, ಕಲ್ಮಂಗಿ, ದಡೇಸುಗೂರು, ಬೂತಲದಿನ್ನಿ, ವಿರುಪಾಪುರ ಹಾಗೂ ಉಮಲೂಟಿ ಗ್ರಾಪಂಯ ಪಿಡಿಒಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net