ಮನೋರಮಾಬಾಯಿ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪಾರಿತೋಷಕ ವಿತರಣೆ

pic
Published on

ಗದಗ ನಗರದ ಮನೋರಮಾಬಾಯಿ ಮೋಹನ್‌ ಕುಡತರಕರ್‌ ಫೌಂಡೇಶನ ಮನೋರಮಾ ಕಾಲೇಜಿನ ಬಿ ಕಾಂ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಪಾರಿತೋಷಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ ಎನ್‌ ಎಮ್‌ ಕುಡತರಕರ ರವರು ವಹಿಸಿಕೊಂಡು ಮಾತನಾಡಿ ರಾಷ್ತ್ಟ ಪ್ರಗತಿಯಲ್ಲಿ ಯುವಕರ ಪಾತ್ರ ಅವಶ್ಯಕವಾಗಿದ್ದು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಲಿರಿ ಎಂದರು. ಮುಖ್ಯ ಅತಿಥಿಗಳಾಗಿ ಡಾ. ರಾಜಶೇಖರ ದಾನರೆಡ್ಡಿ ರವರು ಆಗಮಿಸಿ ಮಾತನಾಡಿ ತಂದೆ ತಾಯಿ ಸೇವೆ ಮಾಡುವುದರೊಂದಿಗೆ ನಮಗಾಗಿ ಅಲ್ಲದೇ ಸಮಾಜಕ್ಕಾಗಿ ದುಡಿಯಲು ಶ್ರಮ ವಹಿಸಿರಿ ಎಂದು ಹೇಳುತ್ತಾ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೆತರ ಚಟುವಟಿಕೆಗಳಲ್ಲಿಯೂ ಪಾಲ್ಗೋಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿರಿ ಎಂದರು..

ಪ್ರಾಚಾರ್ಯರಾದ ಬಿ ಎಸ ಹಿರೇಮಠ ರವರು ಮಾತನಾಡಿ ತಮ್ಮ ಅನುಭವದ ಸೇವಾ ಮನೋಭಾವವನ್ನು ಮೆಲುಕು ಹಾಕುತ್ತಾ ಹಾಸ್ಯಮಯವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಸೃಜನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿರಿ ಎಂದು ಕಿವಿಮಾತು ಹೇಳುತ್ತಾ ನಿಮ್ಮೇಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಆಶಿರ್ವದಿಸಿದರು ವಿವಿಧ ಸಾಂಘಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಮಾಡಲಾಯಿತು

ಈ ಸಂಧರ್ಭದಲ್ಲಿ ಆಡಳಿತಾಧಿಕಾರಿಗಳಾದ ಕಿಶೋರ ಮುದಗಲ್ಲ ಹಾಗೂ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ ಹಾಗೂ ಸಹ ಸಂಯೋಜಕರುಗಳಾದ ಪ್ರೋ ನಿವೇದಿತಾ ಪೋಲೀಸ ಪಾಟೀಲ, ಪ್ರೋ ಸವಿತಾ ಪೂಜಾರ. ಪಿಯುಸಿ ಸಹಸಂಯೋಜಕರಾದ ಪ್ರೋ ರಾಘವೇಂದ್ರ ನವಲಗುಂದ ಪ್ರೋ ರೇಣುಕಾ ಪಾಟೀಲ ಶ್ರೀ ಹರೀಶ ಬಾರಕೇರ, ಆಫೀಸ ಸುಪ್ರೀಡೆಂಟ ಉಮಾ ದಿನ್ನಿ, ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net