ಜಿಲ್ಲಾಧ್ಯಕ್ಷರಾಗಿ ಮನೋಜ್ ಬೋಪಯ್ಯ ಆಯ್ಕೆ

manoj bopaiah
Published on

ಮಡಿಕೇರಿ: ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾನೂನು ಸಲಹೆಗಾರರಾಗಿ ಹಾಗೂ ಕೊಡಗು ಜಿಲ್ಲಾಧ್ಯಕ್ಷರಾಗಿ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆಯಾಗಿದ್ದಾರೆ.

ನಗರದಲ್ಲಿ ವೇದಿಕೆಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯಾಧ್ಯಕ್ಷರಾಗಿ ರಜಿತ್ ಪಾಲ್ತಾಡು ದೇವಪ್ಪ, ಉಪಾಧ್ಯಕ್ಷರಾಗಿ ಕಿಶನ್ ತಿಮ್ಮಯ್ಯ ಹಾಗೂ ಇಬ್ರಾಹಿಂ ನೇಮಕಗೊಂಡರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಎಂ.ಎ.ಶಹಬಾಜ್ ಅಲಿ, ಎಂ.ಟಿ.ಕಿಶನ್ ತಿಮ್ಮಯ್ಯ, ವಸಂತ್ ಸಿದ್ದಾಪುರ, ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಪಿ.ಎಸ್.ಭರತ್ ಕುಮಾರ್ ಹಾಗೂ ಜೀವನ್ ನಾರ್ಕೋಡು ಅವರನ್ನು ಆಯ್ಕೆ ಮಾಡಲಾಯಿತು. ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ವಕೀಲ ಬಿ.ಪಿ.ರಾಘವೇಂದ್ರ ಹಾಗೂ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾಗಿ ವಕೀಲ ಮಹಮ್ಮದ್ ರಾಫಿ ಎಮ್ಮೆಮಾಡು ಅವರನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭ ವೇದಿಕೆಯ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net