ಸ್ಪರ್ಧಾ ಮನೋಭಾವಕ್ಕೆ ಪ್ರತಿಭೋತ್ಸವ ಸಹಕಾರಿ

Prathibhothsava00000000000000000000000
Published on

ಚಿತ್ರದುರ್ಗ: ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಿರುವಂತ ಈ ಯುಗದಲ್ಲಿ ಪ್ರತಿಭಾವಂತರನ್ನು ಗುರುತಿಸಲು, ಸ್ಪರ್ಧಾ ಮನೋಭಾವ ಬೆಳೆಸಲು ಪ್ರತಿಭೋತ್ಸವ ಅತ್ಯಂತ ಸಹಕಾರಿ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಆಯೋಜಿಸಿದ್ದ ಪ್ರತಿಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರ್ು.

ಭವಿಷ್ಯದ ಹಿತದೃಷ್ಟಿಯಿಂದ ಹೆಚ್ಚು ಅಂಕ ಗಳಿಕೆ ವಿದ್ಯಾರ್ಥಿಗಳಿಗೆ ಅನಿವಾರ್ಯ. ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಪ್ರತಿಭೆ ಎಂಬುದು ಪ್ರತಿಯೊಬ್ಬರಲ್ಲೂ ಇದ್ದು, ಕೌಶಲ ಹೆಚ್ಚಿಸಿಕೊಂಡರೆ ಉನ್ನತ ಹುದ್ದೆ ಪಡೆಯುವುದು ಕಷ್ಟವೇನಲ್ಲ ಎಂದು ಸಲಹೆ ನೀಡಿದರು.

ಯುವಸಮೂಹಕ್ಕೆ ಕ್ರಿಕೆಟ್ ಪ್ರೇರಣೆಯಾಗಿದೆ. ಅದರ ಜತೆಗೆ ದೇಸೀಯ ಕ್ರೀಡೆ, ಅಥ್ಲೆಟಿಕ್ಸ್ ಬಗ್ಗೆಯೂ ಆಸಕ್ಗಿ ಇರಬೇಕು. ಇದರಿಂದ ಏಕಾಗ್ರತೆ, ಧೈರ್ಯ, ಬುದ್ಧಿಮಟ್ಟ ಚುರುಕಾಗುತ್ತದೆ ಎಂದರು. ಬಾಕ್ಸ್

ಭಾರತ ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿ ಐದನೇ ಸ್ಥಾನ್ದಲ್ಲಿದೆ. ನಮ್ಮ ವಿಜ್ಞಾನಿಗಳು ವಿದೇಶ, ಅಲ್ಲಿನ ಮಿಲಿಟರಿ ವ್ಯವಸ್ಥೆಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರಾಷ್ಟ್ರದ ಭ ದ್ರತೆಗೆ ಬೇಕಾಗುವ ಎಲ್ಲಾ ಉಪಕರಣಗಳು ಇಲ್ಲಿಯೇ ತಯಾರಾಗಲಿವೆ. ದೇಶವೀಗ ಸದೃಢವಾಗುತ್ತಿದೆ ಎಂದರು.

ಕಳೆದ ಸಾಲಿನ ಬಿ.ಕಾಂ.ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ 9 ನೇ ರ್ಯಾಂಕ್ ಪಡೆದು ಸಾಧನೆಗೈದ ಆರ್.ಎಂ.ವಿದ್ಯುಲತಾ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನಲ್ಲಿ ಈಚೆಗೆ ನಡೆದ ದೇಶಭಕ್ತಿ, ಜನಪದ ಗೀತೆ, ಭರತ ನಾಟ್ಯ, ಪ್ರಬಂಧ, ಚರ್ಚಾ, ಯೋಗಾ, ಆಶುಭಾಷಣ, ಏಕಪಾತ್ರಾಭಿನಯ ಸ್ವರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಡಾ.ಗುಡ್ಡದೇಶ್ವರಪ್ಪ, ವಿಮರ್ಶಕಿ ಡಾ.ಆರ್.ತಾರಿಣಿ ಶುಭದಾಯಿನಿ, ಐಕ್ಯುಎಸಿ ಸಂಚಾಲಕ ಸಿ.ಬಸವರಾಜ್, ಕ್ರೀಡಾ ಸಂಚಾಲಕ ಬಿ.ಎಚ್. ಕುಮಾರಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ಎನ್.ಬಸಣ್ಣಗೌಡ, ಉಪನ್ಯಾಸಕರಾದ ಚನ್ನಕೇಶವ್, ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net