

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಮಣ್ಣೆ ಗ್ರಾಪಂನಲ್ಲಿ ನಿಗದಿಯಾಗಿದ್ದ 2ನೇ ಅವಧಿಗೆ ಅಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಎಸ್‌ಸಿ ಮಹಿಳಾ ಅಭ್ಯರ್ಥಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಮಣ್ಣೆ ವಾರ್ಡ್‌ನ ಜಯಮ್ಮ ಅವಿರೋಧ ಆಯ್ಕೆಯಾದರು. ಆದರೆ 15 ಸದಸ್ಯರ ಬಲದ ಪಂಚಾಯಿತಿಯಲ್ಲಿ ಕೋರಂ ಕೊರತೆ ಇಲ್ಲದ ಕಾರಣ ನೀಡಿ ಚುನಾವಣಾಧಿಕಾರಿ, ನೆಲಮಂಗಲ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ. ರಾಮಕೃಷ್ಣ ಅವರು ಘೋಷಣೆ ತಡೆ ಹಿಡಿದು, ಅ.10ಕ್ಕೆ ಸದಸ್ಯರ ಸಭೆಗೆ ಚೂಸಿದರು.
ಮುಖಂಡ ಗೋಪಿ ವರ್ಮಾ ಮಾತನಾಡಿ, 20 ವರ್ಷಗಳಿಂದಲೂ ಮಣ್ಣೆ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿಗರ ಆಡಳಿತವಿತ್ತು. ಆದರೆ, ಈ ಬಾರಿ ನೆಲಮಂಗಲದಲ್ಲಿ ಕಾಂಗ್ರೆಸ್ ಗೆದ್ದ ಮೇಲೆ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದರು.
ನೂತನ ಗ್ರಾಪಂ ಅಧ್ಯಕ್ಷೆ ಜಯಮ್ಮ ಮಾತನಾಡಿ, ಮಣ್ಣೆ ಗ್ರಾಪಂಗೆ ನೂತನ ಕಟ್ಟಡದ ಅವಶ್ಯಕತೆ ಇದ್ದು, ಎಲ್ಲ ಸದಸ್ಯರ ಸಹಮತ ಪಡೆದು, ಶಾಸಕರ ಬೆಂಬಲದಿಂದ ಕಟ್ಟಡ ನಿರ್ಮಿಸಲಾಗುವುದು. ಹಾಗೆಯೇ, ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ಮುತ್ತುರಾಜು, ಎ.ಮಧುಶ್ರೀ, ತ್ಯಾಮಗೊಂಡ್ಲು ಗ್ರಾಪಂ ಸದಸ್ಯರಾದ ವಸೀಮ್, ಆರೀಫ್, ವಾಸುದೇವ್, ಮುಖಂಡರಾದ ಚಿಕ್ಕೇಗೌಡ, ಅನೀಸ್, ಸಾದತ್ ಉಲ್ಲಾ, ಕೃಷ್ಣಸ್ವಾಮಿ, ಸುನಿಲ್, ಟಿ.ವಿ.ರಾಮಣ್ಣ, ಆರೀಫ್ ಇದ್ದರು.