

ಮಂಗಳೂರು: ಮಣ್ಣಗುಡ್ಡೆಯ ಉತ್ಸಾಹಿ ತರುಣ ವೃಂದದ ವತಿಯಿಂದ ಮಣ್ಣಗುಡ್ಡೆಯ ದ.ಕ. ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಿಸಲಾಯಿತು.
ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅತಿಥಿಯಾಗಿದ್ದರು. ಮೂರು ದಶಕಗಳಿಂದ ನಿರಂತರ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಉತ್ಸಾಹಿ ತರುಣ ವೃಂದದ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಕಾರ್ಪೊರೇಟರ್ ಸಂಧ್ಯಾ ಎಂ. ಆಚಾರ್ಯ ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಕುಮಾರ್, ಮೋಹನ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕಿಶೋರ್, ಶಿಕ್ಷಕಿಯರಾದ ಸುಜಾತಾ, ವನಿತಾ ಆಳ್ವ, ಉತ್ಸಾಹಿ ತರುಣ ವೃಂದದ ಅಧ್ಯಕ್ಷ ಮುಕೇಶ್ ಕುಮಾರ್, ಕಾರ್ಯದರ್ಶಿ ನಿರಂಜನ್ ಗಟ್ಟಿ, ಕೋಶಾಧಿಕಾರಿ ರಮಾನಾಥ ಶೆಟ್ಟಿ, ಪದಾಧಿಕಾರಿಗಳಾದ ಚಂದ್ರಶೇಖರ್ ರಾವ್, ಅಶೋಕ್ ಶೆಟ್ಟಿ, ಪ್ರೇಮಾನಂದ್ ನಾಯಕ್, ಆಶ್ವಥ್ ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿ ಸ್ವಾಗತಿಸಿ, ವಿಶುಕುಮಾರ್ ವಂದಿಸಿದರು. ಉತ್ಸಾಹಿ ತರುಣ ವೃಂದದ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರೂಪಿಸಿದರು.