ಮಣ್ಣಗುಡ್ಡೆ ಗುರ್ಜಿ ಉತ್ಸವದ ಕಚೇರಿ ಉದ್ಘಾಟನೆ

mng-23nov-mannagudde gurji
Published on



ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವರ ದೀಪಾರಾಧನೆ ಉತ್ಸವದ ಅಂಗವಾಗಿ 155ನೇ ಮಣ್ಣಗುಡ್ಡೆ ಗುರ್ಜಿ ಉತ್ಸವ ನ.27ರಂದು ಜರಗಲಿದೆ. ಅಂದು ಸಾಯಂಕಾಲ ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕದ ನೇತ್ರತ್ವದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲ 6.30ರಿಂದ ಧನಶ್ರೀ ಶಬರಾಯ ಮತ್ತು ಗೌತಮ್ ಭಟ್ ಪಿ.ಜಿ.ಮಂಗಳೂರು ಅವರಿಂದ ಭಕ್ತಿ ಸುಧಾ ರಸ ದ್ವಂದ್ವ ಪಿಟೀಲು ವಾದನ , ರಾತ್ರಿ 8ರಿಂದ ಸಭಾ ಕಾರ್ಯಕ್ರಮ, 9.30ರಿಂದ ಸನಾತನ ಯಕ್ಷಾಲಯದ ವೃಂದಾ ಕೊನ್ನಾರ್ ಮತ್ತು ಬಳಗದವರಿಂದ ರಾಕೇಶ ರೈ ಅಡ್ಕ ನಿರ್ದೇಶನದಲ್ಲಿ ಗಜೇಂದ್ರ ಮೋಕ್ಷ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಮಣ್ಣಗುಡ್ಡೆ ಗುರ್ಜಿ ಉತ್ಸವದ ತಾತ್ಕಾಲಿಕ ಕಚೇರಿಯನ್ನು ಪತ್ತುಮುಡಿ ಸೂರ್ಯ ನಾರಾಯಣ ರಾವ್ ಉದ್ಘಾಟಿಸಿದರು. ಗುರ್ಜಿ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ರಮಾನಂದ ಪಾಂಗಳ , ಗೌರವಾಧ್ಯಕ್ಷ ರಮೇಶ್ ಭಟ್, ಮಹಿಳಾ ಘಟಕದ ಕಾರ್ಯದರ್ಶಿ ಮನೋರಮ ಉಮೇಶನ್ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ರಾಜೇಂದ್ರ ಕಲ್ಭಾವಿ ಸ್ವಾಗತಿಸಿ, ಕಾರ್ಯದರ್ಶಿ ರವಿಪ್ರಸಾದ್ ವಂದಿಸಿದರು.ದರು. ಟ್ರಸ್ಟ್‌ನ ಕಾರ್ಯದರ್ಶಿ ಭಾರ್ಗವ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net