

ಮಂಡ್ಯ: ರೈತರ ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ್ರು ಹೇಳಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮನ್‌ಮುಲ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 2021-22 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ವಾಡಿದ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸವಾರಂಭ ಉದ್ಘಾಟಿಸಿ ವಾತನಾಡಿದರು. ಹಾಲು ಒಕ್ಕೂಟದ ವತಿಯಿಂದ ಎಂಬಿಬಿಎಸ್, ಕೃಷಿ, ಪಶು ವೈದ್ಯಕೀಯ ಕೋರ್ಸ್ ಓದುವ ಉತ್ಪಾದಕರ ಮಕ್ಕಳಿಗೆ 20 ಸಾವಿರ ರೂ.ಪ್ರೋತ್ಸಾಹ ಧನ ಕೊಡಲಾಗುತ್ತದೆ. ಉನ್ನತ ವ್ಯಾಸಂಗ ವಾಡುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ವಿದ್ಯಾಸಿರಿ ಯೋಜನೆಯಡಿ ವಿದ್ಯಾಭ್ಯಾಸದ ಸಾಲವನ್ನು ಸಹ ಕೊಡಲಾಗುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು.
ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್. ರುನಂದನ್, ನಿರ್ದೇಶಕರಾದ ಎಸ್.ಪಿ.ಸ್ವಾಮಿ, ಯು.ಸಿ.ಶಿವಕುವಾರ್, ಕೆ.ರವಿ, ನೆಲ್ಲಿಗೆರೆ ಬಾಲು, ಎಂ.ರೂಪಾ, ಕೆ.ರಾಮಚಂದ್ರ, ಬಿ.ಬೋರೇಗೌಡ, ಎಚ್.ಟಿ.ಮಂಜು, ಸುಜಾತಾ ಕೃಷ್ಣ, ಎಂಡಿ ಡಾ.ಪಿ.ಆರ್.ಮಂಜೇಶ್ ಇತರರಿದ್ದರು.