ಅರಣ್ಯ ನಾಶದಿಂದ ಮನುಕುಲಕ್ಕೆ ಅಪಾಯ

Mankind is threatened by forest destruction
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಬಾಗಲಕೋಟೆಯ ರೈಲ್ವೆ ಇಲಾಖೆಯ ಪೊಲೀಸ್ ಠಾಣೆಯ ಆರಕ್ಷಕ, ಪರಿಸರವಾದಿ ಸಿದ್ದಪ್ಪ ಬಾರ್ಕಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಜಗನ್ನಾಥ ವಿ. ಚವಾಣ್, ಸಸ್ಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ನಂಜುಂಡಸ್ವಾಮಿ, ಐಕ್ಯೂಎಸಿ ಸಂಯೋಜಕ ಗಿರಿಜಾ ನಾವದಿಗಿ ಇತರರಿದ್ದರು.
Published on

ಬಾಗಲಕೋಟೆ: ಪ್ರಸಕ್ತ ದಿನಮಾನಗಳಲ್ಲಿ ಅರಣ್ಯ ನಾಶದಿಂದ ಪರಿಸರ ಸಮತೋಲನ ಕಳೆದುಕೊಂಡು ಉಷ್ಣತೆ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಮನುಕುಲಕ್ಕೆ ಅಪಾಯವಾಗಲಿದೆ ಎಂದು ಬಾಗಲಕೋಟೆಯ ರೈಲ್ವೆ ಇಲಾಖೆಯ ಪೊಲೀಸ್ ಠಾಣೆಯ ಆರಕ್ಷಕ, ಪರಿಸರವಾದಿ ಸಿದ್ದಪ್ಪ ಬಾರ್ಕಿ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಾಗಲಕೋಟೆಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಂಸ್ಕೃತ ಚಟುವಟಿಕೆ ವಿಭಾಗಗಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ವಿಶ್ವ ಪರಿಸರ ದಿನ. ಪ್ರತಿ ವರ್ಷ ಜೂ.5 ರಂದು ಪರಿಸರದ ಬಗ್ಗೆ ಜಾಗೃತಿ ಮತ್ತು ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನ ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ಥಿತ್ವಕ್ಕೆ ಕಾರಣವಾಗಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ ವಿ. ಚವಾಣ್, ಸಸ್ಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ನಂಜುಂಡಸ್ವಾಮಿ, ಐಕ್ಯೂಎಸಿ ಸಂಯೋಜಕ ಗಿರಿಜಾ ನಾವದಿಗಿ, ಸಂಸಕ್ಕತ ಚಟುವಟಿಕೆ ಕಾರ್ಯಾಧ್ಯಕ್ಷ ರಾಜು ಮೇಲಿನಮನಿ, ಎನ್‌ಎನ್‌ಎಸ್ ಘಟಕದ ಅಧಿಕಾರಿ ಪ್ರಿಯಾಂಕ ಮಠದ, ಡಾ.ಎಂ.ಎಂ. ಹುದ್ದಾರ ಇತರರಿದ್ದರು. ಶೀಥಲ್ ಬಾರ್ಶಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net