ಪರಿಸರ ರಕ್ಷಣೆಯಿಂದ ಮಾತ್ರ ಮಾನವ ಕುಲಕ್ಕೆ ಉಳಿಗಾಲ

Mankind can survive only by environmental protection
ರಬಕವಿ-ತೇರದಾಳ ರಸ್ತೆ ಮಧ್ಯೆ ಚಿತ್ತರಗಿ ಆಸ್ಪತ್ರೆ ವತಿಯಿಂದ ಸಸಿಗಳನ್ನು ನೆಡಲಾಯಿತು. ಡಾ.ಜಿ. ಎಚ್. ಚಿತ್ತರಗಿ, ಭಾರತಿ ಹಿಪ್ಪರಗಿ ಇದ್ದರು.
Published on

ರಬಕವಿ/ಬನಹಟ್ಟಿ: ಪರಿಸರ ರಕ್ಷಣೆ ಮಾಡುವುದರಿಂದ ಮಾತ್ರ ಮಾನವ ಕುಲಕ್ಕೆ ಉಳಿಗಾಲ. ಇಲ್ಲದಿದ್ದರೆ ಬರ ಎದುರಿಸುವುದು ನಿಶ್ಚಿತ ಎಂದು ರಬಕವಿ ಹೃದಯರೋಗ ತಜ್ಞ ಡಾ. ಜಿ.ಎಚ್. ಚಿತ್ತರಗಿ ತಿಳಿಸಿದರು.

ನಗರ ಸೌಂದರ್ಯ ವೃದ್ಧಿಗೆ ರಬಕವಿ-ತೇರದಾಳ ರಸ್ತೆ ಮಧ್ಯೆ ಗುರುವಾರ ಬೆಳಗ್ಗೆ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು. ಪರಿಸರ ಹೇಗಿದೆ ಹಾಗೆ ಬಿಟ್ಟು ಹೋದರೂ ನೀವು ಅದನ್ನು ಬೆಳೆಸಿದಂತೆ, ಆದರೆ ಯಾವುದೇ ಕಾಲಕ್ಕೂ ಅದನ್ನು ಹಾಳುಗೆಡಬೇಡಿ ಎಂದರು.

ಪ್ರತಿವರ್ಷ ಚಿತ್ತರಗಿ ಆಸ್ಪತ್ರೆಯಿಂದ 5ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡುತ್ತಿದ್ದೇವೆ ಎಂದರು.

ಡಾ. ಜ್ಯೋತಿ ಚಿತ್ತರಗಿ ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ತಾಲೂಕಿನಾದ್ಯಂತ ಜಿಟಿಜಿಟಿ ಮಳೆ ಆರಂಭವಾಗಿದ್ದು, ಇದು ಗಿಡಗಳನ್ನು ನೆಡಲು ಸೂಕ್ತ ಸಮಯ. ಹೀಗಾಗಿ ಆಸ್ಪತ್ರೆ ವತಿಯಿಂದ ಗುರುವಾರ 123 ಸಸಿಗಳನ್ನು ನೆಡಲಾಯಿತು ಎಂದರು. ಡಾ. ದೀಪಾಲಿ ಡಂಗಿ, ಸಂಗಮೇಶ ಚಿತ್ತರಗಿ, ಶಿವಜಾತ ಉಮದಿ, ಸಿಬ್ಬಂದಿ ಭಾರತಿ ಹಿಪ್ಪರಗಿ, ಪ್ರಶಾಂತ ಭಸ್ಮೆ, ರಾಜು ಸಾಲಗುಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net