

ಹಗರಿಬೊಮ್ಮನಹಳ್ಳಿ: ತಾಲೂಕು ಕನಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೈನಳ್ಳಿ ಮಂಜುನಾಥ ಅವಿರೋಧ ಆಯ್ಕೆಯಾಗಿದ್ದಾರೆ. ಪಟ್ಟಣದ ಹಳೇ ಊರಿನ ನೀಲಕಂಠೇಶ್ವರ ದೇಗುಲದ ಆವರಣದಲ್ಲಿ ಕುರಬ ಸಮುದಾಯದ ನೌಕರರು, ಕುಲಗುರುಗಳಾದ ಗುರುವಿನ ಕೊಟ್ರಯ್ಯ ಅವರ ಅಧ್ಯಕ್ಷತೆಯಲ್ಲಿ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಮೈನಳ್ಳಿ ಮಂಜುನಾಥ (ಅಧ್ಯಕ್ಷ), ಎಚ್.ದೇವಪ್ಪ (ಗೌರವ ಅಧ್ಯಕ್ಷ), ಚಿದಾನಂದ (ಕಾರ್ಯದರ್ಶಿ), ಎಚ್.ಉಮೇಶ, ಸಿ.ವೈ.ಮೋರ್ನಾಳ (ಉಪಾಧ್ಯಕ್ಷರು), ಕೋಳಿ ಸೋಮಶೇಖರ್ (ಖಜಾಂಚಿ), ಯರ‌್ರಿಸೀಮೆ ಹೊನ್ನಪ್ಪ, ಯು.ಮಲ್ಲೇಶ (ಸಹ ಕಾರ್ಯದರ್ಶಿಗಳು), ಯು.ಕಡ್ಲೆಪ್ಪ, ಹೊಸಮನಿ ಚನ್ನಬಸಪ್ಪ (ಸಂಘಟನಾ ಕಾರ್ಯದರ್ಶಿ), ಎಂ.ಯೋಗಾನಂದ (ಕಾನೂನು ಸಲಹೆಗಾರ), ನಿರ್ದೇಶಕರಾಗಿ ಹನುಮಂತಪ್ಪ, ಹೇಮಗಿರಿ, ಚುಂಗಿ ಮಹಾಂತೇಶ, ಎಚ್.ಮಲ್ಲಿಕಾರ್ಜುನ, ಬಸವರಾಜ, ಮೆಟ್ರಿ ರೇವಣ್ಣ, ಕೆ.ಬಸವರಾಜ, ಎಲ್.ಜಿ.ಅಜ್ಜಪ್ಪ, ಮಂಜುನಾಥ ಮತ್ತು ಎಚ್.ಗುರಬಸವರಾಜ ಆಯ್ಕೆಯಾಗಿದ್ದಾರೆ.