

ಚಿಕ್ಕಮಗಳೂರು: ಜಿಲ್ಲಾ ಕಾರಾಗೃಹ ನೂತನ ಅಧೀಕ್ಷಕರಾಗಿ ಎಚ್.ಜಿ.ಮಂಜುನಾಥ್ ಸೋಮವಾರ ಅಧಿಕಾರ ವಹಿಸಿಕೊಂಡರು. ವಿಜಯಪುರ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ಮಂಜುನಾಥ್ ವರ್ಗಾವಣೆಯಾಗಿದ್ದಾರೆ.
ಚಿಕ್ಕಮಗಳೂರು ಕಾರಾಗೃಹ ಅಧೀಕ್ಷರಾದ ಎಸ್.ಎಸ್.ಮೇಟಿ ಅವರನ್ನು ಬೆಂಗಳೂರು ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಎಸ್.ಎಸ್.ಮೇಟಿ ಅವರಿಂದ ಮಂಜುನಾಥ್ ಅಧಿಕಾರ ವಹಿಸಿಕೊಂಡರು.